janadhvani

Kannada Online News Paper

ಫೆ.25 ರಿಂದ ಹೆಜಮಾಡಿ ಕೋಡಿ ಉರೂಸ್- ಪೋಸ್ಟರ್ ಬಿಡುಗಡೆ

ಪಡುಬಿದ್ರಿ, ಫೆ.11: ಬದ್ರಿಯಾ ಜುಮಾ ಮಸ್ಜಿದ್ ಹೆಜಮಾಡಿ ಕೋಡಿ ಇದರ ಅಧೀನದಲ್ಲಿ ಸಯ್ಯಿದ್ ಅರಬಿ ವಲಿಯುಲ್ಲಾಹಿ (ಖ.ಸಿ) ರವರ ಎರಡು ವರ್ಷಕ್ಕೊಮ್ಮೆ ನಡೆಸಿಕೊಂಡು ಬರುತ್ತಿರುವ ಉರೂಸ್ ಕಾರ್ಯಕ್ರಮವು ಇದೇ ಫೆಬ್ರವರಿ 25,26 ರಂದು ಹೆಜಮಾಡಿ ಕೋಡಿ ಮಸ್ಜಿದ್ ವಠಾರದಲ್ಲಿ ನಡೆಯಲಿದೆ.

ಫೆಬ್ರವರಿ 25 ರಂದು ಸಯ್ಯಿದ್ ಶಿಹಾಬುದ್ದೀನ್ ತಂಙಳ್ ಮದಕ ನೇತೃತ್ವದಲ್ಲಿ ಬೃಹತ್ ಸ್ವಲಾತ್ ಮಜ್ಲಿಸ್ ನಡೆಯಲಿದೆ. ಫೆಬ್ರವರಿ 26 ರಂದು ಅಸರ್ ನಮಾಜಿನ ಬಳಿಕ ಸಂದಲ್ ಮೆರವಣಿಗೆ ಮಗ್ರಿಬ್ ನಮಾಜಿನ ಬಳಿಕ ‌ಉರೂಸ್ ಸಮಾರೋಪ ಸಮಾರಂಭ ಹಾಗೂ ರಾಜ್ಯ ಮಟ್ಟದ ದಫ್ ಸ್ಪರ್ಧೆ ನಡೆಯಲಿದೆ. ಸಯ್ಯಿದ್ ಶಿಹಾಬುದ್ದೀನ್ ಝೈನಿ ಅಲ್ ಹೈದ್ರೋಸ್ ತಂಙಳ್ ಕಾಸರಗೋಡು ಕೇರಳ ದುಆ ನೇತೃತ್ವ ವಹಿಸಲಿದ್ದಾರೆ.

ಕಾರ್ಯಕ್ರಮದ ಪೋಸ್ಟರನ್ನು ಇಂದು (ಫೆ.11) ಜುಮಾ ನಮಾಜಿನ ಬಳಿಕ ಮಸ್ಜಿದ್ ಅಧ್ಯಕ್ಷರಾದ ಅಬ್ದುಲ್ ಖಾದರ್ ಮುಸ್ಲಿಯಾರ್ ರವರ ಅಧ್ಯಕ್ಷತೆಯಲ್ಲಿ ಬಿಡುಗಡೆಗೊಳಿಸಲಾಯಿತು. ಕಾರ್ಯದರ್ಶಿ ಸಂಶುದ್ದೀನ್, ಉರೂಸ್ ಸಮಿತಿ ಕಾರ್ಯದರ್ಶಿ ನಾಸಿರ್, ಸಿರಾಜ್, ಫಾರೂಕ್ ಬಂಟ್ವಾಳ್ ಹಾಗೂ ಇತರರು ಉಪಸ್ಥಿತಿಯಿದ್ದರು.