ಮಾಣಿ :ಇಲ್ಲಿಗೆ ಸಮೀಪದ ಬದ್ರಿಯಾ ಜುಮಾ ಮಸ್ಜಿದ್ & ಮಅದನುಲ್ ಉಲೂಂ ಎಜ್ಯುಕೇಶನಲ್ ಸೆಂಟರ್ ಶೇರಾ ಇದರ ಸಿಲ್ವರ್ ಜುಬಿಲಿ(25 ನೇ ವಾರ್ಷಿಕ ಸಂಭ್ರಮ) ಮತ್ತು 5ನೇ ಸ್ವಲಾತ್ ವಾರ್ಷಿಕ ಕಾರ್ಯಕ್ರಮವು ಫೆಬ್ರವರಿ 11 ಶುಕ್ರವಾರ ಮಗ್ರಿಬ್ ನಮಾಝ್ ನಂತರ ಶೇರಾ ಮಸೀದಿ ವಠಾರದಲ್ಲಿ ನಡೆಯಿತು.
ಅಸ್ಸಯ್ಯಿದ್ ಮುಹ್ಸಿನ್ ಸೈದಲವಿ ಕೋಯ ಅಲ್ ಬುಖಾರಿ ತಂಙಳ್ ಕಲ್ಲೇರಿ ಸ್ವಲಾತ್ ಗೆ ನೇತೃತ್ವ ವಹಿಸಿದರು. ಕಾರ್ಯಕ್ರಮದಲ್ಲಿ ಅಬ್ದುಲ್ ಲತೀಫ್ ಸಅದಿ ಶೇರಾ ಖತೀಬರು ಸ್ವಾಗತ ಮಾಡಿದರು,
ಗಡಿಯಾರ್ ಜುಮಾ ಮಸೀದಿಯ
ಖತೀಬರಾದ ಉಮರ್ ಫೈಝಿ ಉಸ್ತಾದ್ ಕಾರ್ಯಕ್ರಮವನ್ನು ಉದ್ಘಾಟಿಸಿದರು.ಸುಲೈಮಾನ್ ಸಅದಿ ಪಾಟ್ರಕೋಡಿ ಉಸ್ತಾದ್ ಮುಖ್ಯ ಪ್ರಭಾಷಣ ಮಾಡಿದರು.
ವೇದಿಕೆಯಲ್ಲಿ ಜಲೀಲ್ ಸಖಾಫಿ ಮುಂಡಾಜೆ , ಅಬ್ದುರ್ರಹ್ಮಾನ್ ಮುಸ್ಲಿಯಾರ್,ಯೂಸುಫ್ ಸಈದಿ ನೇರಳಕಟ್ಟೆ,ರಿಯಾಝ್ ಕಳ್ಳಾಜೆ ಹಾಗೂ ಇನ್ನಿತರ ಹಲವಾರು ಗಣ್ಯರು ಉಪಸ್ಥಿತತರಿದ್ದರು.
ಬುಡೋಳಿ ಸಮೀಪದ ಶೇರಾ ಎಂಬಲ್ಲಿ 26 ಜನವರಿ 1997 ರಲ್ಲಿ ಊರ ಹಿರಿಯರ ಸಮ್ಮುಖದಲ್ಲಿ ಮಅದನುಲ್ ಉಲೂಂ ಎಜುಕೇಶನ್ ಸೆಂಟರ್ ಸ್ಥಾಪನೆಗೊಂಡಿತು. 06 ಫೆಬ್ರವರಿ 2004 ರಲ್ಲಿ ಮದ್ರಸ ಹಾಗೂ “ನಿಸ್ಕಾರ ಪಳ್ಳಿ” ಪುನರ್ ನಿರ್ಮಾಣಗೊಂಡು. 14 ಆಗಸ್ಟ್ 2006 ರಲ್ಲಿ ಝೈನುಲ್ ಉಲಮಾ ಮಾಣಿ ಉಸ್ತಾದರ ಸಮ್ಮುಖದಲ್ಲಿ ಬದ್ರಿಯಾ ಜುಮಾ ಮಸ್ಜಿದ್ ವಕ್ಫ್ ಮಾಡಲಾಯಿತು. 2017 ರಲ್ಲಿ ಮತ್ತೆ ಮಸೀದಿಯನ್ನು ವಿಸ್ತರಣೆ ಮಾಡಲಾಯಿತು. ಸಯ್ಯಿದ್ ಶಹೀರ್ ತಂಙಳ್ ಮಲ್ ಹರ್ ರವರು ಉದ್ಘಾಟಸಿದರು.







