janadhvani

Kannada Online News Paper

ಹಾಸ್ಟೆಲ್ ಗೆ ನುಗ್ಗಿ ಎಸ್ಸೆಸ್ಸೆಫ್ ಕಾರ್ಯಕರ್ತನ ಮೇಲೆ ಹಲ್ಲೆ- ಕೊಡಗು ಜಿಲ್ಲಾ ಸಮಿತಿ ಖಂಡನೆ

ಅಕ್ರಮವಾಗಿ ಹಾಸ್ಟೆಲ್ ಪ್ರವೇಶಿಸಿ ಅಲ್ಲಿನ ಬಾಗಿಲು ಮುರಿದು ಹಲ್ಲೆಗೈದಿರುವುದು ವಿದ್ಯಾರ್ಥಿಗಳಲ್ಲಿ ಭಯದ ವಾತಾವರಣ ಸೃಷ್ಟಿಸಿದೆ

ಕುಶಾಲನಗರ : ಕುಶಾಲನಗರದ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ವಿದ್ಯಾರ್ಜನೆಗೈಯ್ಯುತ್ತಿರುವ ಎಸ್ಸೆಸ್ಸೆಫ್ ಕಾರ್ಯಕರ್ತನಾದ ರಾಝಿಕ್ ನ ಮೇಲೆ RSS ಗೂಂಡಾ ಕಾರ್ಯಕರ್ತರು ಹಾಸ್ಟೆಲ್ ಗೆ ನುಗ್ಗಿ ದಾಂಧಲೆ ನಡೆಸಿ ಹಲ್ಲೆಗೈದಿರುವ ಘಟನೆ ನಡೆದಿದ್ದು SSF ಕೊಡಗು ಜಿಲ್ಲಾಧ್ಯಕ್ಷರಾದ ಶಾಫಿ ಸಅದಿ ಸೋಮವಾರಪೇಟೆರವರು ಘಟನೆಯನ್ನು ತೀವ್ರವಾಗಿ ಖಂಡಿಸಿದ್ದಾರೆ.

ಪಾನಮತ್ತನಾಗಿ ಬಂದ ಸಹಪಾಠಿಯೊಬ್ಬನೊಂದಿಗೆ ಕ್ಷುಲ್ಲಕ ವಿಚಾರಕ್ಕಾಗಿ ವಾಗ್ವಾದಗಳು ನಡೆದಿದ್ದು, ಇದನ್ನೇ ಬಂಡವಾಳ ಮಾಡಿಕೊಂಡು ಕೆಲವು ಆರೆಸ್ಸೆಸ್ಸ್ ಗೂಂಡಾಗಳು ವಿದ್ಯಾರ್ಥಿಯ ಮೇಲೆ ಹಲ್ಲೆಗೈದಿರುವುದು ಅಕ್ಷಮ್ಯ ಅಪರಾಧವಾಗಿದೆ,ಕೂಡಲೇ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.

ಅಕ್ರಮವಾಗಿ ಹಾಸ್ಟೆಲ್ ಪ್ರವೇಶಿಸಿ ಅಲ್ಲಿನ ಬಾಗಿಲು ಮುರಿದು ಹಲ್ಲೆಗೈದಿರುವುದು ವಿದ್ಯಾರ್ಥಿಗಳಲ್ಲಿ ಭಯದ ವಾತಾವರಣ ಸೃಷ್ಟಿಸಿದೆ,ಯಾವುದೋ ವಿಚಾರಕ್ಕೆ ಉಂಟಾದ ವಾಗ್ವಾದವನ್ನು ಕೇಸರಿ ಶಾಲಿಗೆ ತಂದು ನೈತಿಕ ಪೋಲಿಸ್ ಗಿರಿ ಮಾಡಿ ಹಲ್ಲೆ ನಡೆಸಲು ಇವರಿಗೆ ಅವಕಾಶ ಕೊಟ್ಟವರಾರು..? ಇದರಲ್ಲಿ ಭಾಗಿಯಾದ ಪ್ರತಿಯೊಬ್ಬ ಅಪರಾಧಿಗಳನ್ನು ಕೂಡಲೇ ಬಂಧಿಸದಿದ್ದಲ್ಲಿ ತೀವ್ರ ಪ್ರತಿಭಟನೆ ಮೂಲಕ ಹೋರಾಟ ನಡೆಸಲಾಗುವುದು ಎಂದು ಅವರು ತಿಳಿಸಿದರು.

ಹಾಸ್ಟೆಲ್ ನಲ್ಲಿ ಹಲವು ವಿದ್ಯಾರ್ಥಿಗಳು ಮದ್ಯಪಾನ ಮಾಡುವವರಿದ್ದಾರೆ ಹಾಗೂ ಇನ್ನಿತರ ಮಾದಕ ಚಟಗಳಿಗೆ ಬಲಿಯಾಗಿದ್ದಾರೆಯೇ ಎಂಬುದನ್ನು ಕೂಡ ಪರೀಶೀಲಿಸಬೇಕು ಎಂದು ಒತ್ತಾಯಿಸಿದ್ದಾರೆ.

error: Content is protected !! Not allowed copy content from janadhvani.com