ಕುವೈತ್ ಸಿಟಿ: ಬಿಕ್ಕಟ್ಟಿನಲ್ಲಿ ಸಿಲುಕಿರುವ ಭಾರತೀಯ ಎಂಜಿನಿಯರ್‌ಗಳ ವಾಸ ದಾಖಲೆಯ ನವೀಕರಣಕ್ಕೆ ಹಾದಿ ಸುಗಮವಾಗುತ್ತಿದೆ. ಕುವೈಟ್ ನ ಭಾರತೀಯ ರಾಯಭಾರಿ ಕೆ. ಜೀವ ಸಾಗರ್ ಅಲ್ಲಿನ ಸೊಸೈಟಿ ಆಫ್ ಇಂಜಿನಿಯರ್ಸ್ ಚೇರ್ಮನ್ ರೊಂದಿಗೆ ನಡೆಸಿದ ಸಂಭಾಷಣೆ ಯಲ್ಲಿ ಎಂಜಿನಿಯರ್ಗಳ ಮಾನ್ಯತಾ ವಿಚಾರಣೆಯನ್ನು ವಿಶೇಷ ಸಮಿತಿಯಿಂದ ತನಿಖೆ ನಡೆಸಲಾಗುವುದು ಎಂದು ಸ್ಪಷ್ಟಪಡಿಸಿದ್ದಾರೆ. ಕುವೈಟ್ ಯುನಿವರ್ಸಿಟಿಯ ಸಹಕಾರದೊಂದಿಗೆ ನಡೆಸುವ ಪರೀಕ್ಷೆಯ ಆಧಾರದಲ್ಲಿ ಸಮ್ಮತಿಯನ್ನು ನೀಡಲಾಗುತ್ತದೆ.
ಅದೇ ವೇಳೆ, ಭಾರತೀಯ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ ಅನುಮೋದನೆಯುಳ್ಳ ರಾಷ್ಟ್ರೀಯ ಬೋರ್ಡ್ ಆಫ್ ಅಕ್ರಿಡಿಟೇಶನ್, ಎನ್.ಬಿ.ಎ ಪಟ್ಟಿಯಲ್ಲಿ ಮಾನ್ಯತೆ ಇರುವ ಕಾಲೇಜುಗಳಲ್ಲಿ ಪದವಿ ಪಡೆದಿರಬೇಕು.ಆದರೆ, 2014 ರಲ್ಲಿ, ಕೇಂದ್ರ ಸರ್ಕಾರವು ಜಾರಿಗೊಳಿಸಿದ ಎನ್‌ಬಿಎ ಮಾನ್ಯತೆ ಇರುವ ಪಟ್ಟಿಯಲ್ಲಿ, ಭಾರತದ ಅನೇಕ ಕಾಲೇಜುಗಳು ಒಳಗೊಂಡಿಲ್ಲ ಎನ್ನುವುದು ವಾಸ್ತವವಾಗಿದೆ.
ಕುವೈಟ್ ನ ಇಂಜಿನಿಯರ್ಸ್ ಸಂಘಟನೆಯ ಪ್ರತಿನಿಧಿಗಳಿಗೆ ಸಾಧ್ಯವಾದಷ್ಟು ಬೇಗ ಈ ಸಮಸ್ಯೆಯನ್ನು ಪರಿಹರಿಸುವ ಭರವಸೆಯನ್ನು ಮಾನವ ಕಲ್ಯಾಣ ಸಚಿವ ಪ್ರಕಾಶ್ ಜಾವೇದ್ಕರ್ ನೀಡಿದ್ದಾರೆ.ಸಚಿವ ಜಾವೇದ್ಕರ್ ಕುವೈಟಿನ ಅಧಿಕಾರಿಗಳೊಂದಿಗೆ ಸಹಕರಿಸುವುದಾಗಿ ತಿಳಿಸಿದ್ದು, ಶೀಘ್ರದಲ್ಲೇ ಅನುಮೋದಿತ ಇಂಜಿನಿಯರಿಂಗ್ ಸಂಸ್ಥೆಗಳ ಪಟ್ಟಿಯನ್ನು ಕಳುಹಿಸುವುದಾಗಿ ಕುವೈಟ್ ಪ್ರತಿನಿಧಿಗೆ ಭರವಸೆ ನೀಡಿದ್ದಾರೆ.
ನಿಯೋಗದ ಪ್ರತಿನಿಧಿಗಳು, ಸಹ ಸಚಿವರುಗಳಾದ ವಿ.ಕೆ.ಸಿಂಗ್, ಎಂಡಿ ಅಕ್ಬರ್ ಮತ್ತು ವಿದೇಶಾಂಗ ಸ್ಥಾಯಿ ಸಮಿತಿಯ ಚೇರ್ಮನ್ ಶಶಿ ತರೂರ್ ಎಂಪಿ ಅವರನ್ನು ಭೇಟಿ ಮಾಡಿ ದೂರು ಸಲ್ಲಿಸಿದ್ದರು. ಭಾರತದ ರಾಯಭಾರಿ ವಿದ್ಯಾ ಸಾಗರ್ ಕುವೈಟ್ ನ ಅಧಿಕಾರಿಗಳೊಂದಿಗೆ ನಡೆಸಿದ ಸಂಧಾನದಿಂದ ಪರಿಹಾರಕ್ಕೆ ಹಾದಿ ತೆರೆದಿದೆ.