ಮಜೂರು: ಊರಿನ ಧಾರ್ಮಿಕ, ಶೈಕ್ಷಣಿಕ ಕಾಳಜಿಯೊಂದಿಗೆ ಶಾಂತಿ, ಸಹೋದರತೆ, ಸೌಹಾರ್ಧತೆಯ ನೆಲೆಗಟ್ಟಿನ ಪ್ರಮುಖ ಬದ್ಧತೆಯಲ್ಲಿ ಕಾರ್ಯಚರಿಸುತ್ತಾ ಮಲ್ಲಾರು, ಮಜೂರು ಬದ್ರಿಯ ಜುಮುಅ ಮಸ್ಜಿದ್ ಮಾದರಿಯೋಗ್ಯ ಕಾರ್ಯತತ್ಪರತೆಯ ನಿಷ್ಕಳಂಕತೆ ಸೇವೆಗೈಯ್ಯುತ್ತಿರುವ ಜಮಾಆತ್ ಆಡಳಿತ ಸಮಿತಿ ಸೇವೆ ಶ್ಲಾಘನೀಯವೆಂದು ಜಮಾಅತ್ ಮಹಾಸಭೆಯ ಉದ್ಘಾಟಿಸಿ ಖತೀಬರಾದ ಅಲ್ಹಾಜ್ ಎಂ.ಕೆ. ಅಬ್ದುರ್ರಶೀದ್ ಅಲ್-ಕಾಮಿಲ್ ಸಖಾಫಿ ಮಾತನಾಡಿದರು.
ಸಮಿತಿ ನಿರ್ಗಮನ ಅಧ್ಯಕ್ಷ ಇಬ್ರಾಹಿಮ್ ಐಡಿಯಲ್ ದ್ವಿವಾರ್ಷಿಕದಲ್ಲಿ ಸಾಥ್ ನೀಡಿ ಸಹಕರಿಸಿದ ಅಂಗಸಂಸ್ಥೆ ಸದಸ್ಯರು, ಬೆನ್ನುತಟ್ಟಿ ಪ್ರೊತ್ಸಾಹಿಸಿದ ಜಮಾಅತಿಗರು ಸರ್ವರಿಗೂ ಕೃತಜ್ಞತೆ ಸಲ್ಲಿಸಿದರು. ಕರ್ನಾಟಕ ರಾಜ್ಯ ಬ್ಯಾರಿ ಸಾಹಿತ್ಯ ಅಕಾಡೆಮಿ ಗೌರವ ಪುರಸ್ಕ್ರತ ಪಿ.ಪಿ. ಬಶೀರ್ ಉಸ್ತಾದ್ (ದಫ್ ಉಸ್ತಾದ್) ಮಜೂರು ಇವರನ್ನು ಸಭೆಯಲ್ಲಿ ಗೌರವಿಸಿ ಸನ್ಮಾನಿಸಲಾಯಿತು.
ಜಮಾಅತ್ ಮಹಾಸಭೆಯಲ್ಲಿ ಮುಂದಿನ ಸಾಲಿನ ನೂತನ ಸಮಿತಿಯ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.
ಅಧ್ಯಕ್ಷರು – ಶಅಬಾನ್ ಕರಂದಾಡಿ
ಉಪಾಧ್ಯಕ್ಷರು – ಅಬ್ದುಲ್ಲಾ ಪೊಲಿಪು
ಪ್ರ.ಕಾರ್ಯದರ್ಶಿ – ಮುಹಮ್ಮದ್ ಶರೀಫ್ ಮಜೂರು
ಕಾರ್ಯದರ್ಶಿ – ಅಬ್ದುಲ್ ಹಮೀದ್ ಮಲ್ಲಾರು
ಕಾರ್ಯದರ್ಶಿ – ಎಂ.ಕೆ. ಇಬ್ರಾಹಿಂ ಕರಂದಾಡಿ
ಕೋಶಾಧಿಕಾರಿ – ಫೈಝಲ್ ಮೊಯ್ಯೊಟ್ಟು
ಕಾರ್ಯಕಾರಿ ಸಮಿತಿ ಸದಸ್ಯರುಗಳು – ಅಬ್ದುರ್ರಝಾಕ್ ಕೊಪ್ಪಲತೋಟ, ಶರ್ಫುದ್ದೀನ್ ಕೊಂಬಗುಡ್ಡೆ, ಅಬ್ದುಲ್ಲ ಚಂದ್ರನಗರ, ಹಸನಬ್ಬ ಮಜೂರು, ಸುಲೈಮಾನ್ ಗುಡ್ಡೇಕೇರಿ, ಮುಹಮ್ಮದ್ ಫಾರೂಖ್ ಚಂದ್ರನಗರ, ಹಾಜಿಮೋನು ಕರಂದಾಡಿ, ರಫೀಕ್ ಪಕೀರ್ಣಕಟ್ಟೆ, ಶಅಬಾನ್ ಕಡಸಲೆಬೆಟ್ಟು, ಅಶ್ರಫ್ ಅಚ್ಚಾಲ್, ಶರ್ಫುದ್ದೀನ್ ಶೇಖ್ ಕರಂದಾಡಿ ಇವರನ್ನು ಸರ್ವಾನುಮತಗಳಿಂದ ಆಯ್ಕೆ ಮಾಡಲಾಯಿತು.
ಶಅಬಾನ್ ಕೊಪ್ಪಲತೋಟ ಇವರ ಸಭಾಧ್ಯಕ್ಷತೆಯಲ್ಲಿ, ಕಾರ್ಯದರ್ಶಿ ಶಂಸುದ್ದೀನ್ ಕೊಪ್ಪಲತೋಟ ಗತ ವಾರ್ಷಿಕ ವರದಿ ಆಯ್ಯ-ವ್ಯಯ ವಾಚಿಸಿದರು. ಪ್ರ.ಕಾರ್ಯದರ್ಶಿ ಸ್ವಾದಿಖ್ ಕೆ.ಪಿ. ಮಲ್ಲಾರು ಮುಂದಿನ ಯೋಜನಾ ನಕ್ಷೆ ಮಹಾಸಭೆಗೆ ಮಂಡಿಸಿದರು.
ನೂತನ ಪ್ರ.ಕಾರ್ಯದರ್ಶಿ ಮುಹಮ್ಮದ್ ಶರೀಫ್ ದನ್ಯವಾದ ಸಲ್ಲಿಸಿದರು. ನಿರ್ಗಮನ ಸಮಿತಿ ಸದಸ್ಯ ಪಿ.ಪಿ. ಬಶೀರ್ ಉಸ್ತಾದ್ ಸ್ವಾಗತಿಸಿ ಕಾರ್ಯಕ್ರಮ ನಿರ್ವಹಿಸಿದರು.








