janadhvani

Kannada Online News Paper

ಗುಂಡುಕಲ್ಲು: ಅನ್ಸ್ವಾರುಲ್ ಮುಸ್ಲಿಮೀನ್ ಮಸ್ಜಿದ್ ಟ್ರಸ್ಟ್, SYS, SSF,SBS ನಿಂದ ಗಣರಾಜ್ಯೋತ್ಸವ ದಿನಾಚರಣೆ

ಕರ್ನಾಟಕ ರಾಜ್ಯ ಸುನ್ನೀ ಯುವಜನ ಸಂಘ SYS, ಸುನ್ನೀ ಸ್ಟೂಡೆಂಟ್ಸ್ ಫೆಡರೇಷನ್ SSF ಮತ್ತು ಸುನ್ನೀ ಬಾಲ ಸಂಘ SBS ಗುಂಡುಕಲ್ಲು ಶಾಖೆ ವತಿಯಿಂದ ದೇಶದ 73ನೇ ಗಣರಾಜ್ಯೋತ್ಸವ ದಿನಾಚರಣೆಯ ಅಂಗವಾಗಿ ಧ್ವಜಾರೋಹಣ ಕಾರ್ಯಕ್ರಮ ನಡೆಯಿತು.

ಮಸ್ಜಿದುಲ್ ಅನ್ಸ್ವಾರ್ ನಲ್ಲಿ ನಡೆದ ಕಾರ್ಯಕ್ರಮದಲ್ಲಿ SYS ಹಾಗೂ SSF ಅಧ್ಯಕ್ಷರು ಧ್ವಜಾರೋಹಣ ಮಾಡಿದರು.ಅಬ್ದುಲ್ ಅಝೀಝ್ ಸಅದಿ ಉಸ್ತಾದ್ ದುಅಃ ಮಾಡಿದರು. SYS & SSF ರೈನ್ ಬೋ ಸದಸ್ಯರು ಭಾಗವಹಿಸಿದ್ದರು.