ಮಂಗಳೂರು : ಮಹತ್ವ ಪೂರ್ಣ ಜನವರಿ 26 ನೇ ದಿನದ ರಾಷ್ಟ್ರೀಯ ಹಬ್ಬವಾದ ಗಣ ರಾಜ್ಯೋತ್ಸವ ಸಮಾರಂಭ ದಲ್ಲಿ, ಬ್ರಹ್ಮಶ್ರೀ ನಾರಾಯಣ ಗುರುಗಳ ಸ್ತಬ್ಧ ಚಿತ್ರದ ಟ್ಯಾ ಬ್ಲೋ ವಾಹನ ಸಂಚಲನ ಪ್ರದರ್ಶನವನ್ನು,ಪೆರೇಡ್ ನಿಂದ ಅನರ್ಹ ಗೊಳಿಸಿದ ಕೇಂದ್ರ ಸರಕಾರದ ನಡೆ ತೀವ್ರ ವಿಷಾದನೀಯ.
ನಾರಾಯಣ ಗುರುಗಳು ದಕ್ಷಿಣ ಭಾರತದಲ್ಲಿ ಹಿಂದುಳಿದ ಜನತೆಗೆ ಧಾರ್ಮಿಕ,ಆದ್ಯಾತ್ಮಿಕ ಮತ್ತು ಆರಾಧನಾ ಕೇಂದ್ರಗಳ ಪ್ರವೇಶ ಹಕ್ಕುಗಳನ್ನು ಸ್ಥಾಪಿಸಿದ ಓರ್ವ ಸಮುದಾಯ ಮಹಾತ್ಮ ಮೇರು ವ್ಯಕ್ತಿ ಯಾಗಿದ್ದಾರೆ. ಅವರ ಒಂದೇ ಮತ,ಕುಲ, ದೇವ ಪ್ರತಿಪಾದನೆ ಜಾಗತಿಕ ಮನ್ನಣೆ ಹೊಂದಿದ ಒಂದು ಪ್ರಭಲ ಸಿದ್ಧಾಂತವಾಗಿದೆ. ಆದುದರಿಂದ ನಾರಾಯಣ ಗುರುಗಳ ಸ್ತಬ್ಧ ಚಿತ್ರ ಗಣ ರಾಜ್ಯೋತ್ಸವ ಸಮಾರಂಭ ದಲ್ಲಿ ಸರ್ವ ರೀತಿಯಲ್ಲೂ ಕೂಡಾ ಅರ್ಹತೆ ಪಡೆಯಬೇಕಿತ್ತು.
ಅವರು ಭಾರತದ ಆದ್ಯಾತ್ಮಿ ಕ ಚರಿತ್ರೆಯ ಆಸ್ತಿ ಆಗಿದ್ದಾರೆ. ಅವರ ಪ್ರತಿಪಾದನೆಯ ಮೌಲ್ಯಗಳು ಎಂದೆಂದಿಗೂ ಶಾಶ್ವತ. ಅವರ ಸ್ತಬ್ಧ ಚಿತ್ರ ಪ್ರದರ್ಶನ ಅರ್ಹತೆ ಪಡೆಯಲೇ ಬೇಕಾಗಿದೆ. ಈ ಹಿಂದೆ ಚಾರಿತ್ರಿಕ ಸ್ವಾತಂತ್ರ ಹೋರಾಟಗಾರ ಹಜ್ರತ್ ಟಿಪ್ಪು ಸುಲ್ತಾನರ ಸ್ತಬ್ಧ ಚಿತ್ರ ಪ್ರದರ್ಶನ ಚಾಲನೆಯಲ್ಲಿ ಇತ್ತು, ಕ್ರಮೇಣ ಅಂತಹ ಪ್ರದರ್ಶನಗಳನ್ನೂ ಕೇಂದ್ರ ಸರಕಾರ ಇದೇ ರೀತಿ ಕೈಬಿಟ್ಟಿತ್ತು. ಭಾರತದ ಮಹತ್ವ ಪೂರ್ಣ ಚಾರಿತ್ರಿಕ ಮತ್ತು ಆದ್ಯಾತ್ಮೀಕ ವ್ಯಕ್ತಿಗಳ ಕಡೆಗಣನೆ ಈ ದೇಶದ ಜಾತ್ಯಾತೀತ ವೈಭವ ತೆ ಯನ್ನು ನಾಶ ಪಡಿಸುವ ಒಂದು ಷಡ್ಯಂತ್ರ ವಾಗಿದೆ. ಅದರ ಭಾಗವೇ ಬ್ರಹ್ಮಶ್ರೀ ನಾರಾಯಣ ಗುರುಗಳ ಸ್ತಬ್ಧ ಚಿತ್ರ ಪ್ರದರ್ಶನ ವನ್ನು ಪೆರೇಡ್ ನಿಂದ ಅನರ್ಹತೆ ಗೊಳಿಸಿ ಹೊರ ಹಾಕಲಾಗಿದೆ . ಕೇಂದ್ರ ಸರಕಾರದ ಈ ನಡೆ ಜಾತ್ಯಾತೀತ ಮೌಲ್ಯಗಳ ಅವಹೇಳನ ವಾಗಿದೆ, ಮತ್ತು ಈ ವರ್ತನೆ ಖಂಡನೀಯ.
ಕೆ.ಅಶ್ರಫ್
ಅಧ್ಯಕ್ಷರು.ದ.ಕ.ಜಿಲ್ಲಾ ಮುಸ್ಲಿಮ್ ಒಕ್ಕೂಟ.