✍️ಸ್ವಾದಿಕ್ ಸಂಪಾಜೆ
ಪವಿತ್ರ ಇಸ್ಲಾಂ ಶಾಂತಿ-ಸೌಹಾರ್ದತೆ ಮತ್ತು ಸಾಮರಸ್ಯವನ್ನು ಸಾರುವ ಧರ್ಮ. ಇಸ್ಲಾಮಿಗೆ ತನ್ನದೇ ಆದ ಸುಂದರ ಸಂಸ್ಕೃತಿ ಮತ್ತು ಸ್ಪಷ್ಟವಾದ ಆಶಯಾದರ್ಶಗಳಿವೆ.
ಇತ್ತೀಚೆಗೆ ಮದುವೆ ಮತ್ತು ಇನ್ನಿತರ ಸಮಾರಂಭಗಳಲ್ಲಿ ಅನಾಚಾರಗಳ ಮೂಲಕ ಇಸ್ಲಾಮಿನ ನೈಜ ಸಂಸ್ಕೃತಿಯನ್ನು ಹರಾಜು ಮಾಡುವ ಪ್ರಯತ್ನ ನಡೆಯುತ್ತಿರುವುದು ಬಹಳ ಖೇದಕರ ಮತ್ತು ಖಂಡನೀಯ.
ಪ್ರವಾದಿ ಚರ್ಯೆಯಾದ ವಿವಾಹದೊಂದಿಗೆ ನವದಂಪತಿಗಳು ಹೊಸ ಜೀವನಕ್ಕೆ ಕಾಲಿಡುವಾಗ ಇಂತಹ ದುರ್ವರ್ತನೆಗಳ ಮೂಲಕ ಅವರ ಮಾನಸಿಕ ನೆಮ್ಮದಿ ಕೆಡಿಸುವುದು ಸರಿಯಲ್ಲ.
ಇಂತಹ ದುಷ್ಕೃತ್ಯಗಳಿಗೆ ಇಸ್ಲಾಂನಲ್ಲಿ ಯಾವುದೇ ಪ್ರೋತ್ಸಾಹವೂ ಇಲ್ಲ, ಪುರಾವೆಯೂ ಇಲ್ಲ. ಯುವಕರು ಇಂತಹ ನೀಚ ದುಷ್ಕೃತ್ಯಗಳಿಗೆ ಕಡಿವಾಣ ಹಾಕಿ ಸಮಾಜದಲ್ಲಿ ಸಾಮರಸ್ಯ ಕಾಪಾಡುವ ಪ್ರಯತ್ನ ಮಾಡಬೇಕಾಗಿದೆ.