janadhvani

Kannada Online News Paper

ಸಾಲೆತ್ತೂರು ದಿಬ್ಬಣ ವಿವಾದ ; ವಧೂವರರ ಮನೆಯವರು ಹೊಣೆಯಲ್ಲ!!

ಉಲಮಾಗಳ ಮಾತುಗಳಿಗೆ ಚಿಕ್ಕಾಸೂ ಬೆಲೆ ಕೊಡದ ಒಂದು ವರ್ಗ ಮುಸ್ಲಿಂ ಸಮುದಾಯದಲ್ಲಿ ಹುಟ್ಟಿಕೊಂಡಿದೆ. ಅವರಿಂದಲೇ ಇಂತಹ ಅತಿರೇಕಗಳು ವ್ಯಾಪಿಸುತ್ತಿರುವುದು

✍️ಎ.ಕೆ.ನಂದಾವರ

ಉಲಮಾಗಳನ್ನು ಹೊಣೆಯಾಗಿಸುವ ಬರಹಗಳು ಬರಲಾರಂಭಿಸಿವೆ. ಉಲಮಾಗಳ ಹಿಡಿತದಿಂದ ಈ ಸಮುದಾಯವನ್ನು ಹೊರತರಲು ಕಳೆದ ಕೆಲವು ದಶಕಗಳಿಂದ ಶತಾಯಗಥಾಯ ಪ್ರಯತ್ನಿಸುತ್ತಿರುವ ಶಕ್ತಿಗಳೇ ಇಂದು ಉಲಮಾಗಳು ಮಾತನಾಡಬೇಕು ಅನ್ನುತ್ತಿದ್ದಾರೆ.

ಉಲಮಾಗಳ ಮಾತುಗಳಿಗೆ ಚಿಕ್ಕಾಸೂ ಬೆಲೆ ಕೊಡದ ಒಂದು ವರ್ಗ ಮುಸ್ಲಿಂ ಸಮುದಾಯದಲ್ಲಿ ಹುಟ್ಟಿಕೊಂಡಿದೆ. ಅವರಿಂದಲೇ ಇಂತಹ ಅತಿರೇಕಗಳು ವ್ಯಾಪಿಸುತ್ತಿರುವುದು. ಅಂದ ಹಾಗೆ ಇಂತಹ ಅನಾಚಾರಗಳಿಗೆ ವರನ ಮನೆಯವರನ್ನಾಗಲೀ ವಧುವಿನ ಮನೆಯವರನ್ನಾಗಲೀ ಹೆಚ್ಚಿನ ಸಂದರ್ಭಗಳಲ್ಲಿ ಹೊಣೆ ಮಾಡುವಂತಿಲ್ಲ. ಊರಿನ ಜಮಾಅತ್ ಕಮಿಟಿಗಳ ತಲೆಗೂ ಕಟ್ಟುವ ಹಾಗಿಲ್ಲ.

ವರನಿಗೊಂದು ಫ್ರೆಂಡ್ಸ್ ಸರ್ಕಲ್ ಇರುತ್ತೆ! ಎಲ್ಲಾ ಸುಖ-ದುಃಖಗಳಲ್ಲಿ ಸಾತ್ ನೀಡುವ ಫ್ರೆಂಡ್ಸ್ ಅದೊಂದು ದಿನ ಅತಿರೇಕದಿಂದ ವರ್ತಿಸುವಾಗ; ವರನ ಮನೆಯವರು ಮುಲಾಜಿಗೊಳಗಾಗುತ್ತಾರೆ. ವಧುವಿನ ಮನೆಯವರು ಅಸಹಾಯಕಾರಾಗಿತ್ತಾರೆ.
ಅಂತಹ ಫ್ರೆಂಡ್ಸ್ ಸರ್ಕಲ್ ಗಳಲ್ಲಿರುವವರು ಉಲಮಾಗಳನ್ನು ರೋಲ್ ಮಾಡೆಲ್ ಗಳನ್ನಾಸಿಕೊಂಡವರೂ ಅಲ್ಲ! ಕೆಲವೊಮ್ಮೆ ಉಲಮಾಗಳಿಗೆ ಸಂಬಂಧಿಸಿದ ವಿಷಯಗಳನ್ನು ಟ್ರೋಲ್ ಮಾಡುವುದರಲ್ಲೂ ಅವರು ಒಂದು ಹೆಜ್ಜೆ ಮುಂದೆನೇ ಇರುತ್ತಾರೆ.ಆದುದರಿಂದ ಇಂತಹ ಅತಿರೇಕಗಳಿಗೆ ‘ಫ್ರೆಂಡ್ಸ್ ಸರ್ಕಲ್’ಗಳನ್ನೇ ಹೊಣೆ ಮಾಡಬೇಕಿದೆ.

ಪರಿಹಾರ ಹೇಗೇ?

ಯುವತಲೆಮಾರು ಸ್ವಯಂ ಜಾಗೃತಗೊಳ್ಳಬೇಕಷ್ಟೆ. ವಿವಾಹ ಎಂಬುದು ಪುಣ್ಯಸಂಪಾದನೆಯ ಆರಾಧನೆಗಳಲ್ಲೊಂದು. ಅದನ್ನು ಶಿಸ್ತುಬದ್ಧವಾಗಿ, ಅಚ್ಚುಕಟ್ಟಾಗಿ ನಿರ್ವಹಿಸಬೇಕೆಂಬ ಪ್ರಜ್ಞೆ ಸ್ವಯಂ ಬೆಳೆಸಿಕೊಳ್ಳಬೇಕು. ಕ್ರಿಕೆಟ್ ಮೈದಾನದಲ್ಲಿ, ಪ್ರೀಮೀಯರ್ ಪಂದ್ಯಾಟಗಳಲ್ಲಿ ಅವುಗಳ ನಿಯಮಾವಳಿಗಳ ಮೇಲೆ ತೋರಿಸುವ ಬದ್ಧತೆ, ನಿಷ್ಠೆಯನ್ನು ಆರಾಧಾನಾಲಯ, ಆರಾಧಾನಕಾರ್ಯಗಳಲ್ಲೂ ಪಾಲಿಸಲು ಯುವಜನತೆ ಸ್ವಯಂ ನಿರ್ಧಾರಕ್ಕೆ ಬರಬೇಕು. ಯುವಕರ ಪುಂಡಾಟಕ್ಕೆ ಜಮಾತ್ ಕಮಿಟಿಯನ್ನು ಹೊಣೆ ಮಾಡುವವರು; ಜಮಾಅತ್ ಕಮಿಟಿಗಳಿಗಿರುವ ಅಧಿಕಾರದ ಇತಿಮಿತಿ ಅರ್ಥ ಮಾಡಿಕೊಳ್ಳಬೇಕು.

error: Content is protected !! Not allowed copy content from janadhvani.com