janadhvani

Kannada Online News Paper

ಮಸ್ಜಿದುಲ್ ಖಿಳ್ರ್ ಪೇರಿಮಾರ್: ಸ್ವಲಾತ್ ವಾರ್ಷಿಕ ಹಾಗೂ ಖಾಝೀ ಸ್ವೀಕಾರ ಸಮಾರಂಭ

ಮಸ್ಜಿದುಲ್ ಖಿಳ್ರ್ ಪೇರಿಮಾರ್ ಇದರ ವತಿಯಿಂದ ಸ್ವಲಾತ್ ವಾರ್ಷಿಕ ಹಾಗೂ ಖಾಝೀ ಸ್ವೀಕಾರ ಸಮಾರಂಭ 2022 ಜನವರಿ 09 ಆದಿತ್ಯವಾರ ಸಂಜೆ 03 ಗಂಟೆಗೆ ಸರಿಯಾಗಿ ಪೇರಿಮಾರ್ ಮಸೀದಿ ಸಭಾಂಗಣದಲ್ಲಿ ನಡೆಯಲಿಕ್ಕಿದೆ.

ಖುರ್ರತುಸ್ಸಾದಾತ್ ಸಯ್ಯಿದ್ ಕೂರತ್ ತಂಙಳ್ ಕಾರ್ಯಕ್ರಮದ ನೇತೃತ್ವ ವಹಿಸಲಿರುವರು. ಝೈನುಲ್ ಉಲಮಾ ಮಾಣಿ ಉಸ್ತಾದ್ ಖಾಝಿ ಸ್ವೀಕರಿಸಲಿರುವರು. ಎಸ್. ಪಿ ಹಂಝ ಸಖಾಫಿ ಬಂಟ್ವಾಳ ವಿಷಯ ಮಂಡಿಸಲಿಕಿದ್ದಾರೆ. ಇದೇ ವೇಳೆ ರಾಜ್ಯದ ನೂತನ ವಖ್ಫ್ ಅಧ್ಯಕ್ಷರಾಗಿ ಆಯ್ಕೆಗೊಂಡ ಶಾಫಿ ಸಅದಿಯರಿಗೆ ಸನ್ಮಾನ ಕಾರ್ಯಕ್ರಮವು ನಡೆಯಲಿದೆ.

ಕಾರ್ಯಕ್ರಮದಲ್ಲಿ ಇನ್ನಿತರ ಉಲಮಾ ಉಮರಾ ನಾಯಕರು ಭಾಗವಹಿಸಲಿದ್ದಾರೆ.