ಬೆಂಗಳೂರು: ಹೆಬ್ಬಾಳ ಬಳಿ ಮಸೀದಿಯ ಆವರಣದಲ್ಲಿ ಸಿಲಿಂಡರ್ ಸ್ಫೋಟವಾಗಿದೆ.ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯವಾಗಿಲ್ಲ.
ಅನಿಲ ಸೋರಿಕೆಯಾಗಿ ಮಸೀದಿಯ ಒಳಗೆ ಬೆಂಕಿ ಕಾಣಿಸಿಕೊಂಡಿದೆ. ಘಟನಾ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ. ಗ್ಯಾಸ್ ಲೀಕ್ನಿಂದ ಬೆಂಕಿ ಹೊತ್ತಿಕೊಂಡಿದೆ ಎನ್ನಲಾಗಿದೆ. ಘಟನೆ ನಡೆಯುವ ವೇಳೆ ಮಸೀದಿಯ ಒಳಗೆ ಇದ್ದವರೆಲ್ಲರೂ ಹೊರಗೆ ಬಂದಿದ್ದಾರೆ. ನಂತರ ಸಿಲಿಂಡರ್ ಸ್ಫೋಟವಾಗಿದೆ.
ನಾಗವಾರ ಹೆಬ್ಬಾಳಕ್ಕೆ ತೆರಳುವ ರಸ್ತೆಯಲ್ಲಿ ಘಟನೆ ನಡೆದಿದೆ. ಮಸೀದಿ ಅವರಣದಲ್ಲಿ ಗ್ಯಾಸ್ ಸ್ಟೌ ರಿಪೇರಿ ಅಂಗಡಿಯಿತ್ತು. ಅಂಗಡಿಯಲ್ಲಿದ್ದ ಗ್ಯಾಸ್ ಸಿಲಿಂಡರ್ನಿಂದ ಘಟನೆ ಸಂಭವಿಸಿದೆ. ಘಟನಾ ಸ್ಥಳಕ್ಕೆ ಗೋವಿಂದ ಪುರ ಪೊಲೀಸರು ಭೇಟಿ ನೀಡಿದ್ದಾರೆ.