janadhvani

Kannada Online News Paper

ಇಂದು ಖಂಡಿಗ,ಮಂಚಿಬೈಲಿನಲ್ಲಿ ತಾಜುಲ್ ಉಲಮಾ ಅನುಸ್ಮರಣೆ ಸಂಗಮ

ಸುರಿಬೈಲು: ಸುನ್ನೀ ಜಂಇಯ್ಯತುಲ್ ಮುಅಲ್ಲಿಮೀನ್(SJM)
ಸುರಿಬೈಲು ರೇಂಜ್ ಹಾಗೂ ಸುನ್ಮೀ ಮ್ಯಾನೇಜ್‌ಮೆಂಟ್ ಅಸೋಸಿಯೇಷನ್(SMA)
ಸುರಿಬೈಲು ರೀಜನಲ್ ವತಿಯಿಂದ ಇಂದು ಮಗ್ರಿಬ್ ನಮಾಝ್ ಬಳಿಕ ಖಂಡಿಗ,ಮಂಚಿಬೈಲಿನಲ್ಲಿ ತಾಜುಲ್ ಉಲಮಾ ಹಾಗೂ ಅಗಲಿದ ನಾಯಕರ ಅನುಸ್ಮರಣೆ ಸಂಗಮ ನಡೆಯಲಿದೆ.

ಸಯ್ಯಿದ್ ಮುಶ್ತಾಖುರ್ರಹ್ಮಾನ್ ತಂಙಳ್ ಚಟ್ಟೆಕ್ಕಲ್ ದುಆ ನೇತೃತ್ವ ನೀಡಲಿದ್ದಾರೆ.
ಸಭೆಯ ಅಧ್ಯಕ್ಷತೆಯನ್ನು ಅಬ್ದುರ್ರಝ್ಝಾಖ್ ಸಖಾಫಿ ಮಂಚಿ,ಕೊಳ್ನಾಡು ವಹಿಸಲಿದ್ದಾರೆ.
ಶೈಖುನಾ ಮಂಚಿ ಉಸ್ತಾದ್ ಸಭೆಯನ್ನು ಉದ್ಘಾಟಿಸಲಿದ್ದಾರೆ.
ನೌಫಲ್ ಸಖಾಫಿ ಕಳಸ ಮುಖ್ಯ ಭಾಷಣ ಮಾಡಲಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.