ಮಂಗಳೂರು : ಎಸ್ಸೆಸ್ಸೆಫ್ ದ.ಕ.ಜಿಲ್ಲೆ ವೆಸ್ಟ್ ವತಿಯಿಂದ ಪ್ರತಿಭೋತ್ಸವ -2k21 ಕಾರ್ಯಕ್ರಮವು ನವೆಂಬರ್ 20 ಹಾಗೂ 21 ರಂದು ದಕ್ಷಿಣ ಕನ್ನಡ ಜಿಲ್ಲೆಯ ಪ್ರಸಿದ್ದ ವಿದ್ಯಾ ಸಂಸ್ಥೆಯಾದ ದಾರುಲ್ ಅಶ್’ಅರಿಯ್ಯಾ ಸುರಿಬೈಲ್ ನಲ್ಲಿ , SSF ದ.ಕ.ಜಿಲ್ಲೆ ವೆಸ್ಟ್ ಅಧ್ಯಕ್ಷರಾದ ನವಾಝ್ ಸಖಾಫಿ ಅಡ್ಯಾರ್ ಪದವು ರವರ ನೇತೃತ್ವದಲ್ಲಿ ಬಹಳ ವಿಜ್ರಂಭಣೆಯಿಂದ ಜರಗಿತು. SYS ದಕ್ಷಿಣ ಕನ್ನಡ ಜಿಲ್ಲೆ ವೆಸ್ಟ್ ಕೋಶಾಧಿಕಾರಿ ಬಶೀರ್ ಹಾಜಿ ಬಿ.ಸಿ.ರೋಡ್ ರವರು ಧ್ವಜಾರೋಹಣ ಮಾಡುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
ದಾರುಲ್ ಅಶ್’ಅರಿಯ್ಯಾ ಸುರಿಬೈಲ್ ಉಪಾಧ್ಯಕ್ಷರಾದ ಸಯ್ಯದ್ ಶಿಹಾಬುದ್ದೀನ್ ತಂಙಳ್ ಮದಕ ದುಆ ನೆರವೇರಿಸಿದರು. SYS ದಕ್ಷಿಣ ಕನ್ನಡ ಜಿಲ್ಲೆ ವೆಸ್ಟ್ ಅಧ್ಯಕ್ಷರು ಹಾಗೂ
ದಾರುಲ್ ಅಶ್’ಅರಿಯ್ಯಾ ಸುರಿಬೈಲ್ ಮ್ಯಾನೇಜರ್ ಸಿ.ಎಚ್.ಮುಹಮ್ಮದಲಿ ಸಖಾಫಿ ರವರು ಕಾರ್ಯಕ್ರಮವನ್ನು ಉದ್ಘಾಟಿಸಿದರು. ಮೊದಲನೇ ದಿನದ ಕಾರ್ಯಕ್ರಮದಲ್ಲಿ ಗಣ್ಯ ಅತಿಥಿಯಾಗಿ ಆಗಮಿಸಿದ್ದ ಮಂಗಳೂರು ವಿಧಾನಸಭೆ ಶಾಸಕರಾದ ಸನ್ಮಾನ್ಯ ಯು.ಟಿ.ಖಾದರ್ ರವರು ಎಸ್ಸೆಸ್ಸೆಫ್ ನಡೆಸುವ ಕಾರ್ಯಕ್ರಮದ ಶಿಸ್ತುಬದ್ದತೆಯನ್ನು ವಿವರಿಸುವುದರ ಮೂಲಕ ಒಂದೆರಡು ಹಿತನುಡಿಗಳನ್ನಾಡಿದರು. ಕಾರ್ಯಕ್ರಮ ಎರಡನೇ ದಿನವೂ ಮುಂದುವರಿದು ಪ್ರತಿಭೋತ್ಸವದ ಅಂಗವಾಗಿ ಎಸ್ಸೆಸ್ಸೆಫ್ ದ.ಕ.ಜಿಲ್ಲೆ ವೆಸ್ಟ್ ವತಿಯಿಂದ ಹೊರತಂದ ದೃಷ್ಟಿ ಪ್ರತಿಭೋತ್ಸವ ಸ್ಪೆಷಲ್ ಬುಲೆಟಿನನ್ನು ಕರ್ನಾಟಕ ರಾಜ್ಯ ಮಾಜಿ ಕಾರ್ಯದರ್ಶಿ ಸಿರಾಜುದ್ದೀನ್ ಸಖಾಫಿ ಕನ್ಯಾನ ರವರು ಬಿಡುಗಡೆಗೊಳಿಸಿದರು.
ಎರಡು ದಿನಗಳ ಕಾಲ ನಡೆದ ಅತ್ಯಂತ ಸಂಭ್ರಮ ಸಡಗರದ ಪ್ರತಿಭೋತ್ಸವ ಕಾರ್ಯಕ್ರಮದಲ್ಲಿ 6 ಡಿವಿಷನ್ ಗಳ ಸರಿಸುಮಾರು 400ಕ್ಕೂ ಹೆಚ್ಚು ಪ್ರತಿಭೆಗಳು ಭಾಗವಹಿಸಿದ್ದರು. ಭಾಷಣ, ಹಾಡು, ಕ್ವಿಝ್, ಚರ್ಚಾಗೋಷ್ಠಿ, ದಫ್, ಬುರ್ದಾ, ಪ್ರಬಂಧ,ಕ್ರಾಂತಿಗೀತೆ,
ಸೈನ್ಸ್ ಮೋಡಲ್, ಮೆಮೋರಿ ಟೆಸ್ಟ್, ಎಂಬಿತ್ಯಾದಿ ವಿಭಾಗಗಳಲ್ಲಿ ನಡೆದ ಸ್ಪರ್ಧೆಗಳಂತೂ ನೋಡುಗರ ಕಣ್ಣಿಗೆ ಅವಿಸ್ಮರಣೀಯ ಕ್ಷಣಗಳಂತಿತ್ತು. ಬಹಳ ಪೈಪೋಟಿಯಿಂದ ನಡೆದ ಸ್ಫರ್ಧೆಯಲ್ಲಿ ಉಳ್ಳಾಲ ಡಿವಿಷನ್ ಮೊದಲ ಸ್ಥಾನವನ್ನು ತನ್ನದಾಗಿಸಿಕೊಂಡರೆ, ಮುಡಿಪು ಡಿವಿಷನ್ ಎರಡನೇ ಸ್ಥಾನವನ್ನು ಅಲಂಕರಿಸಿ, ಸುರತ್ಕಲ್ ಡಿವಿಷನ್ ಮೂರನೇ ಸ್ಥಾನವನ್ನು ಪಡೆದುಕೊಂಡಿತು.
ಕಾರ್ಯಕ್ರಮದ ಮುಕ್ತಾಯದ ಭಾಗವಾಗಿ ನವೆಂಬರ್ 21 ರಂದು ಸಂಜೆ ಸಮಾರೋಪ ಸಮಾರಂಭ ಕೂಡಾ ನಡೆಯಿತು. ಸಯ್ಯದ್ ಮುಶ್ತಾಕುರ್ರಹ್ಮಾನ್ ತಂಙಳ್ ಚಟ್ಟೆಕಲ್ ರವರು ದುಆ ನೆರವೇರಿಸಿದರು. ಎಸ್ಸೆಸ್ಸೆಫ್ ದಕ್ಷಿಣ ಕನ್ನಡ ಜಿಲ್ಲೆ ವೆಸ್ಟ್ ಇದರ ಕಲ್ಚರಲ್ ಕೌನ್ಸಿಲ್ ಕಾರ್ಯದರ್ಶಿ ಫಾರೂಖ್ ಸಖಾಫಿ ಕಾಟಿಪಳ್ಳ ರವರು ಪ್ರತಿಭೋತ್ಸವದ ಅನುಭವ ಹಾಗೂ ಅದರಿಂದಾಗ ಪ್ರಯೋಜನಗಳ ಬಗ್ಗೆ ಪ್ರತಿಭೆಗಳನ್ನು ಉದ್ದೇಶಿಸಿ ಮಾತಾನಾಡಿದರು. ವೇದಿಕೆಯಲ್ಲಿ ಎಸ್ಸೆಸ್ಸೆಫ್ ದಕ್ಷಿಣ ಕನ್ನಡ ಜಿಲ್ಲೆ ವೆಸ್ಟ್ ಸದಸ್ಯರಾದ ಸಯ್ಯದ್ ಖುಬೈಬ್ ತಂಙಳ್ ಉಳ್ಳಾಲ, ದಾರುಲ್ ಅಶ್’ಅರಿಯ್ಯ ಸುರಿಬೈಲ್ ಪ್ರಿನ್ಸಿಪಾಲ್ ಅಬೂಬಕ್ಕರ್ ಬಾಖವಿ, SYS ಕರ್ನಾಟಕ ರಾಜ್ಯ ಪ್ರಧಾನ ಕಾರ್ಯದರ್ಶಿ ಎಮ್ಮೆಸ್ಸೆಂ ಅಬ್ದುರ್ರಶೀದ್ ಝೈನಿ ಕಕ್ಕಿಂಜೆ, SYS ಕರ್ನಾಟಕ ರಾಜ್ಯ ಕಾರ್ಯದರ್ಶಿ ಜಿ.ಎಂ.ಮುಹಮ್ಮದ್ ಕಾಮಿಲ್ ಸಖಾಫಿ, ಕರ್ನಾಟಕ ರಾಜ್ಯ ಪ್ರತಿಭೋತ್ಸವ ಸಮಿತಿ ಚೇರ್ಮಾನ್ ಮುಸ್ತಫಾ ನ’ಈಮಿ ಹಾವೇರಿ, SSF ಕರ್ನಾಟಕ ರಾಜ್ಯ ಪ್ರಧಾನ ಕಾರ್ಯದರ್ಶಿ ಇಸ್ಮಾಯಿಲ್ ಮಾಸ್ಟರ್ ಮರಿಕ್ಕಳ, SSF ದಕ್ಷಿಣ ಕನ್ನಡ ಜಿಲ್ಲೆ ಮಾಜಿ ಅಧ್ಯಕ್ಷ ಇಸ್’ಹಾಕ್ ಝುಹ್ರಿ ಸೂರಿಂಜೆ, SSF ಕರ್ನಾಟಕ ರಾಜ್ಯ ಕಾರ್ಯದರ್ಶಿ ಎನ್.ಸಿ.ರಹೀಂ ಉಡುಪಿ, SSF ದಕ್ಷಿಣ ಕನ್ನಡ ಜಿಲ್ಲೆ ಮಾಜಿ ಅಧ್ಯಕ್ಷ ಇಬ್ರಾಹಿಂ ಸಖಾಫಿ ಸೆರ್ಕಳ, SSF ದಕ್ಷಿಣ ಕನ್ನಡ ಜಿಲ್ಲೆ ಮಾಜಿ ಪ್ರಧಾನ ಕಾರ್ಯದರ್ಶಿ ಶರೀಫ್ ನಂದಾವರ, SSF ದಕ್ಷಿಣ ಕನ್ನಡ ಜಿಲ್ಲೆ ವೆಸ್ಟ್ ಪ್ರತಿಭೋತ್ಸವ ಸಮಿತಿ ಚೇರ್ಮಾನ್ ಆರೀಫ್ ಝುಹ್ರಿ ಮುಕ್ಕ ಉಪಸ್ಥಿತರಿದ್ದರು.
ಪ್ರತಿಭೋತ್ಸವದಲ್ಲಿ ಪ್ರಥಮ ಹಾಗೂ ದ್ವಿತೀಯ ಸ್ಥಾನಿಯಾಗಿ ಹೊರಹೊಮ್ಮಿದ ಡಿವಿಷನ್’ಗಳಿಗೆ ಸ್ಮರಣಿಕೆ ವಿತರಿಸಲಾಯಿತು.
SSF ದಕ್ಷಿಣ ಕನ್ನಡ ಜಿಲ್ಲೆ ವೆಸ್ಟ್ ಇದರ ಪ್ರಧಾನ ಕಾರ್ಯದರ್ಶಿ ಹೈದರ್ ಅಲಿ ಕಾಟಿಪಳ್ಳ ಸ್ವಾಗತಿಸಿ, SSF ದಕ್ಷಿಣ ಕನ್ನಡ ಜಿಲ್ಲೆ ವೆಸ್ಟ್ ಪ್ರತಿಭೋತ್ಸವ ಸಮಿತಿ ಜನರಲ್ ಕನ್ವೀನರ್ ನೌಫಲ್ ಫರೀದ್ ನಗರ ಧನ್ಯವಾದ ಸಮರ್ಪಿಸಿದರು.