ರಿಯಾದ್,ನ.19: ಡಿಸೆಂಬರ್ 4 ರಿಂದ ಸೌದಿಯ ವ್ಯಾಪಾರ ಕೇಂದ್ರಗಳಲ್ಲಿ QR ಕೋಡ್ ಹೊಂದಿರುವ ಬಿಲ್ಗಳು ಕಡ್ಡಾಯವಾಗಿದೆ ಎಂದು ಝಕಾತ್ ತೆರಿಗೆಗಳು ಮತ್ತು ಕಸ್ಟಮ್ಸ್ ಪ್ರಾಧಿಕಾರ ಹೇಳಿದೆ. ಇನ್ನು ಮುಂದೆ ಎಲೆಕ್ಟ್ರಾನಿಕ್ ಬಿಲ್ಲಿಂಗ್ ವ್ಯವಸ್ಥೆ ಅಳವಡಿಸದವರಿಗೆ ಎಚ್ಚರಿಕೆ ನೀಡಲಾಗುವುದಿಲ್ಲ ಎಂದು ಪ್ರಾಧಿಕಾರ ಎಚ್ಚರಿಕೆ ನೀಡಿದೆ.
ತೆರಿಗೆ ವಂಚನೆಯನ್ನು ತಡೆಗಟ್ಟುವುದು ಮತ್ತು ವಹಿವಾಟುಗಳನ್ನು ಹೆಚ್ಚು ಪಾರದರ್ಶಕವಾಗಿಸುವ ಉದ್ದೇಶದಿಂದ ಝಕಾತ್ ತೆರಿಗೆ ಮತ್ತು ಕಸ್ಟಮ್ಸ್ ಪ್ರಾಧಿಕಾರವು ಈ ಕ್ರಮಕ್ಕೆ ಮುಂದಾಗಿದೆ.ಇದರ ಭಾಗವಾಗಿ ಡಿಸೆಂಬರ್ 4 ರಿಂದ ವ್ಯಾಪಾರಗಳಲ್ಲಿ ಹೊಸ ವ್ಯವಸ್ಥೆ ಜಾರಿಗೆ ಬರಲಿದೆ.
ಬಿಲ್ಗಳು ಖರೀದಿಸಿದ ವಸ್ತುವಿನ ವಿವರಗಳು, ತೆರಿಗೆ ಮಾಹಿತಿ ಮತ್ತು ಕ್ಯೂಆರ್ ಕೋಡ್ ಅನ್ನು ಒಳಗೊಂಡಿರಬೇಕು. ವ್ಯಾನ್ಗಳು ಮತ್ತು ಲಾರಿಗಳಲ್ಲಿನ ಸರಕುಗಳಿಗೆ ಕಾನೂನು ಅನ್ವಯಿಸುತ್ತದೆ. ಇದರಿಂದ ಅಕ್ರಮ ಮತ್ತು ಲೆಕ್ಕಕ್ಕೆ ಸಿಗದ ವಸ್ತುಗಳಿಗೆ ಕಡಿವಾಣ ಬೀಳಲಿದೆ ಎಂದು ಪ್ರಾಧಿಕಾರ ಅಂದಾಜಿಸಿದೆ.
ಅಕ್ರಮ ಮಾರ್ಗಗಳ ಮೂಲಕ ತೆರಿಗೆ ವಂಚಿಸಿ ಸಾಗಿಸುವ ವಸ್ತುಗಳನ್ನು ಕ್ಯೂಆರ್ ಕೋಡ್ ಸೇರ್ಪಡೆಯೊಂದಿಗೆ ಹಿಡಿಯಲಾಗುತ್ತದೆ. ಡಿಸೆಂಬರ್ 4ರ ನಂತರ ಇದಕ್ಕಾಗಿ ವಿಶೇಷ ತಂಡವನ್ನು ಇಳಿಸಲಾಗುತ್ತದೆ. ಅಂದಿನಿಂದ ದಂಡ ವಿಧಿಸಲಾಗುವುದು. ಈ ದಿನಾಂಕದ ನಂತರ ಪೆನ್ನಿಂದ ಬರೆದ ಬಿಲ್ಗಳು ಕಾನೂನುಬದ್ಧವಾಗಿ ಮಾನ್ಯವಾಗುವುದಿಲ್ಲ. ದಂಡ 10,000 ರಿಯಾಲ್ ಆಗಿದೆ. ಕ್ಯೂಆರ್ ಕೋಡ್ ಇಲ್ಲದ ಬಿಲ್ ಗೆ ಆರಂಭದಲ್ಲಿ 5,000 ರಿಯಾಲ್ ದಂಡ ವಿಧಿಸಲಾಗುತ್ತದೆ. ಕಾನೂನು ವಿಧಾನದ ಬದಲಾವಣೆಗೆ ಸಿದ್ಧರಾಗಿರಬೇಕು ಎಂದು ಪ್ರಾಧಿಕಾರವು ವ್ಯಾಪಾರಿಗಳಿಗೆ ಎಚ್ಚರಿಕೆ ನೀಡಿದೆ.