janadhvani

Kannada Online News Paper

ಇತಿಹಾಸ ಸೃಷ್ಟಿಸಿದರು ಶಾಫಿ ಸಅದಿ

1954ರಲ್ಲಿ ವಕ್ಫ್ ಬೋರ್ಡ್ ಅಸ್ತಿತ್ವಕ್ಕೆ ಬಂದ ಕಾಲದಿಂದ ಈವರೆಗಿನ ಇತಿಹಾಸದಲ್ಲಿ ಹೊಸ ದಾಖಲೆ ಸೃಷ್ಟಿಸಿದ್ದೀರಿ, ಶಾಫೀ ಸಅದಿ... ಕಂಗ್ರಾಜುಲೇಶನ್ಸ್!

🖋️ KM ಅಬೂಬಕರ್ ಸಿದ್ದೀಕ್ ಮೋಂಟುಗೋಳಿ

ಎರಡು ಕಾರಣಕ್ಕಾಗಿ ಈ ಆಯ್ಕೆ ಸಂಭ್ರಮಕ್ಕೆ ಅರ್ಹವಾಗಿದೆ. ಮೊದಲನೆಯದಾಗಿ, ಧಾರ್ಮಿಕ ಸಂಸ್ಥೆಗಳನ್ನು ನಿಯಂತ್ರಿಸುವ ವಕ್ಫ್ ಬೋರ್ಡಿಗೆ ಧರ್ಮ ವಿದ್ವಾಂಸರೊಬ್ಬರ ನಾಯಕತ್ವ ಸಿಗುವುದು ಕರ್ನಾಟಕದಲ್ಲಿ ಇದೇ ಮೊದಲ ಬಾರಿಗೆ ಇರಬೇಕು. ಎರಡನೆಯದಾಗಿ, ಸಂಘ-ಸಂಸ್ಥೆಗಳ ಮೂಲಕ ದೀರ್ಘಕಾಲದಿಂದ ಸಮಾಜದೊಂದಿಗೆ ಬೆರೆತು, ಸಮುದಾಯದ ಸ್ಥಿತಿಗತಿಗಳನ್ನು ಅನುಭವದಿಂದ ಅರಗಿಸಿಕೊಂಡಿರುವ ಸಂಘಟನಾ ನಾಯಕನೊಬ್ಬ ಸಮಾಜಕ್ಕೆ ನಿಕಟವಾಗಿ ಸಂಬಂಧಿಸಿದ ಪ್ರಮುಖ ಸಂಸ್ಥೆಯೊಂದರ ಸಾರಥ್ಯ ವಹಿಸಿಕೊಳ್ಳುತ್ತಿದ್ದಾರೆ.

1954ರಲ್ಲಿ ವಕ್ಫ್ ಬೋರ್ಡ್ ಅಸ್ತಿತ್ವಕ್ಕೆ ಬಂದ ಕಾಲದಿಂದ ಈವರೆಗಿನ ಇತಿಹಾಸದಲ್ಲಿ ಹೊಸ ದಾಖಲೆ ಸೃಷ್ಟಿಸಿದ್ದೀರಿ, ಶಾಫೀ ಸಅದಿ… ಕಂಗ್ರಾಜುಲೇಶನ್ಸ್!

ಉಲಮಾಗಳು ವಕ್ಫ್ ಬೋರ್ಡ್‌ನ ಗೌರವಧನ ಪಡೆಯುವುದಕ್ಕಷ್ಟೇ ಅರ್ಹರಲ್ಲ, ವಕ್ಫ್ ಬೋರ್ಡಿನ ಗೌರವಾನ್ವಿತ ಹುದ್ದೆಯನ್ನು ಪಡೆಯುವುದಕ್ಕೂ ಅರ್ಹರು ಎಂಬುದನ್ನು ನೀವು ಸಾಬೀತುಪಡಿಸಿದ್ದೀರಿ. ಎಸ್ಸೆಸ್ಸೆಫ್ ಮತ್ತು ಕರ್ನಾಟಕ ಮುಸ್ಲಿಂ ಜಮಾತ್ ಗಳ ಸಾರಥ್ಯ ವಹಿಸಿ ನಾಡಿನುದ್ದಕ್ಕೂ ಸಂಚರಿಸಿ ಸಮುದಾಯದ ಸ್ಥಿತಿಗತಿಗಳನ್ನು ಚಿಕಿತ್ಸಕ ದೃಷ್ಟಿಯಿಂದ ನೋಡಿದ್ದೀರಿ. ಸಮುದಾಯದ ಅಗತ್ಯಗಳನ್ನು ಅತ್ಯಂತ ಹತ್ತಿರದಿಂದ ಅರಿತಿದ್ದೀರಿ. ಬೇಡಿಕೆ ಸಲ್ಲಿಸುವ ಮಟ್ಟದಿಂದ ಬೇಡಿಕೆ ಈಡೇರಿಸುವ ಸ್ಥಾನಕ್ಕೇರಿದ್ದೀರಿ. ನಿಮ್ಮ ಆಯ್ಕೆಯಿಂದ ಇಡೀ ಸಮಾಜ ಹೆಮ್ಮೆಪಡುತ್ತಿದೆ. ವಿಶೇಷತಃ ಸುನ್ನೀ ಕರ್ನಾಟಕ ಸಂಭ್ರಮಿಸುತ್ತಿದೆ. ಶುಭ ನಿರೀಕ್ಷೆಗಳ ಕನಸು ಕಾಣುತ್ತಿದೆ. ನೀವು ನಿರಾಸೆಗೊಳಿಸುವುದಿಲ್ಲವೆಂದು ನಂಬುತ್ತೇವೆ.
ಅಲ್ಲಾಹನ ಅನುಗ್ರಹವಿರಲಿ, ಆಮೀನ್.

Proud of you Shafi Sa’adi, Ayyadakallah…

ರಾಜ್ಯ ವಕ್ಫ್ ಬೋರ್ಡ್‌ ಅಧ್ಯಕ್ಷರಾಗಿ ಎನ್ ಕೆ ಎಂ ಶಾಫಿ ಸಅದಿ ಆಯ್ಕೆ

error: Content is protected !! Not allowed copy content from janadhvani.com