janadhvani

Kannada Online News Paper

ಮಾಣಿ ಪ್ರಕರಣ,ಸಮಾಜ ಸೇವಕನ ಬಂಧನ- ಸೂರಿಕುಮೇರು ಜಮಾಅತ್ ಸಮಿತಿ ಖಂಡನೆ

ಮಾಣಿ: ಮೂರು ದಿನಗಳ ಹಿಂದೆ ಮಾಣಿಯಲ್ಲಿ ಅಪಘಾತ ನಡೆದ ಸ್ಥಳದಲ್ಲಿ ಯಾವುದೇ ಕಾರಣವಿಲ್ಲದೆ ಇನ್ನೊಂದು ಕಾರಿನಲ್ಲಿದ್ದ ಮುಸ್ಲಿಂ ಯುವಕರ ಮೇಲೆ ಹಿಗ್ಗಾಮುಗ್ಗಾ ಥಳಿಸುವ ಅಮಾನವೀಯ ರೀತಿಯ ಹಲ್ಲೆ ಪ್ರಕರಣದ ವೀಡಿಯೋಗಳು ಸಾಮಾಜಿಕ ತಾಣಗಳಲ್ಲಿ ಹರಿದಾಡುತ್ತಿದ್ದು ಆರೋಪಿಗಳನ್ನು ಅದರಲ್ಲಿ ಸ್ಪಷ್ಟವಾಗಿ ಗುರುತಿಸಲು ಸಾಧ್ಯವಾಗುತ್ತದೆ.

ಚುನಾವಣೆಗಳು ಸಮೀಪಿಸುವಾಗ ಗಲಭೆ ಎಬ್ಬಿಸಿ ಲಾಭ ಪಡೆಯಲು ದುಷ್ಕರ್ಮಿಗಳು ಸಂದರ್ಭವನ್ನು ದುರುಪಯೋಗಪಡಿಸಿಕೊಂಡಿದ್ದು ಅದಕ್ಕೆ ಸಂಬಂಧಿಸಿದಂತೆ ನೈಜ ಆರೋಪಿಗಳನ್ನು ಬಂಧಿಸದೆ ಗಲಾಟೆ ಬಿಡಿಸಲು ಹೋದ ಸಮಾಜ ಸೇವಕನನ್ನು ಬಂಧಿಸಿ ನೀಡುವ ಸಂದೇಶವಾದರೂ ಏನು? ಗಲಭೆ ನಡೆಯಲಿ ಯಾರೂ ಬಿಡಿಸಲು ಹೋಗಬಾರದು ಎಂದೇ? ನಾಯಕತ್ವ ಗುಣಹೊಂದಿದ ಎಲ್ಲಾ ಜನರ ಸಮಸ್ಯೆಗಳಿಗೆ ಸ್ಪಂದಿಸಿ ಪರಿಹಾರ ಸೂಚಿಸುವ ಜನಸ್ನೇಹಿ ನಿರಪರಾಧಿ ವ್ಯಕ್ತಿ ಸೂರಿಕುಮೇರು ಹನೀಫ್ ಸಂಕ ಎಂಬವರನ್ನು ವಿಚಾರಣೆಯ ನೆಪದಲ್ಲಿ ಬಂಧಿಸಿ ಪ್ರಕರಣ ದಾಖಲಿಸಿರುವುದು ಖಂಡನೀಯವಾಗಿದೆ ಎಂದು ಸೂರಿಕುಮೇರು ಬದ್ರಿಯಾ ಜುಮಾ ಮಸೀದಿಯ ಆಡಳಿತ ಸಮಿತಿ ಪ್ರಕಟಣೆಯಲ್ಲಿ ತಿಳಿಸಿದೆ.

error: Content is protected !! Not allowed copy content from janadhvani.com