janadhvani

Kannada Online News Paper

ಸುಬ್ಬಗುಳಿ ಮಸೀದಿ ಬಳಿ ಭಯ ಹುಟ್ಟಿಸುವ ಪ್ರಯತ್ನ: ಆರೋಪಿಗಳನ್ನು ಗರಿಷ್ಠ ಶಿಕ್ಷೆಗೊಳಪಡಿಸಬೇಕು- ಕರ್ನಾಟಕ ಮುಸ್ಲಿಂ ಜಮಾಅತ್

ಬೋಳಿಯಾರ್ ಸಮೀಪದ ಸುಬ್ಬಗುಳಿ ಮಸೀದಿ ಬಳಿ ಕಳೆದ ರಾತ್ರಿ ಫ್ಯಾಶಿಸ್ಟ್ ಶಕ್ತಿಗಳು ಕೋಮು ಸಾಮರಸ್ಯ ಕೆಡಿಸುವ ಪ್ರಯತ್ನ ಮತ್ತು ಘೋಷಣೆಗಳು ಕೂಗಿರುವುದನ್ನು ಕರ್ನಾಟಕ ಮುಸ್ಲಿಂ ಜಮಾಅತ್ ತೀವ್ರ ವಾಗಿ ಖಂಡಿಸಿದೆ.

ಸರಕಾರ ಮತ್ತು ಪೋಲೀಸ್ ಇಲಾಖೆಯು ಇಂತಹ ದುಷ್ಟರಿಗೆ ಉಗ್ರ ಶಿಕ್ಷೆಯನ್ನು ನೀಡುವ ಮೂಲಕ ಸರ್ವಧರ್ಮೀಯರು ಸಮಾನವಾಗಿ ಗೌರವಿಸುವ ಎಲ್ಲಾ ಆರಾಧನಾಲಯಗಳಿಗೆ ವಿಶೇಷ ಭದ್ರತೆ ಒದಗಿಸಬೇಕು ಇತ್ತೀಚೆಗೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕ್ರಿಮಿನಲ್ ಗಳ ಕುಕ್ರತ್ಯ ಮಿತಿ ಮೀರುತ್ತಿದ್ದು , ಪೋಲೀಸ್ ಇಲಾಖೆ ತೀವ್ರ ಕಟ್ಟೆಚ್ಚರ ವಹಿಸಬೇಕಾಗಿದೆ.