janadhvani

Kannada Online News Paper

ಪೌರತ್ವ ದಾಖಲೆಯಾಗಿ ಜನನ ಪ್ರಮಾಣಪತ್ರ – ಕೇಂದ್ರ ಸರ್ಕಾರದ ಮಹತ್ವದ ನಿರ್ಧಾರ

ಜನನ ಪ್ರಮಾಣ ಪತ್ರವನ್ನು ಪೌರತ್ವ ದಾಖಲೆಯಾಗಿಸುವ ಪ್ರಸ್ತಾಪವನ್ನು ಮುಂದಿಟ್ಟ ಪ್ರಧಾನಿ

ನವದೆಹಲಿ: ಜನನ ಪ್ರಮಾಣಪತ್ರ (birth certificate)ಗಳನ್ನು ಪೌರತ್ವ ದಾಖಲೆಯನ್ನಾಗಿ ಮಾಡಲು ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ.

ಕಳೆದ ಸೆಪ್ಟೆಂಬರ್ 18 ರಂದು ಎಲ್ಲಾ ಇಲಾಖೆಗಳು ಮತ್ತು ಸಚಿವಾಲಯಗಳ ಕಾರ್ಯದರ್ಶಿಗಳೊಂದಿಗೆ ಪ್ರಧಾನಿ ನರೇಂದ್ರ ಮೋದಿ ಅವರ ಮ್ಯಾರಥಾನ್ ಸಭೆಯ ನಂತರ ಕೇಂದ್ರವು ಸಮಗ್ರ 60 ಅಂಶಗಳ ಕ್ರಿಯಾ ಯೋಜನೆಯನ್ನು ಸಿದ್ಧಪಡಿಸಿದೆ.

ಜನನ ಪ್ರಮಾಣಪತ್ರ ಪೌರತ್ವ ನೋಂದಣಿ, ವ್ಯಾಪಾರ ಒಪ್ಪಂದಗಳ ಮೇಲಿನ ಉದ್ಯೋಗ ಖಾತರಿ, ಸಾರ್ವಜನಿಕ ಪರಿಸರ ಕಾನೂನು ಮತ್ತು ಕುಟುಂಬದ ಮಾಹಿತಿಯ ಸಂಗ್ರಹ ಸೇರಿದಂತೆ 60 ಕ್ಕೂ ಹೆಚ್ಚು ಪ್ರಮುಖ ನಿರ್ಧಾರಗಳನ್ನು ಪ್ರತ್ಯೇಕವಾಗಿ ಪರಿಗಣಿಸಲಾಗಿದೆ.

ಈ ಸಭೆಯಲ್ಲಿ ಪ್ರಧಾನಿಯವರು, ಪೌರತ್ವ ದಾಖಲೆಯಾಗಿ ಜನನ ಪ್ರಮಾಣ ಪತ್ರವನ್ನು ಜೋಡಣೆ ಮಾಡುವ ಪ್ರಸ್ತಾಪವನ್ನು ಮುಂದಿಟ್ಟಿದ್ದಾರೆ.ಈ ಬಗ್ಗೆ ಅಧ್ಯಯನ ನಡೆಸಿ ಒಂದು ತಿಂಗಳೊಳಗೆ ವರದಿ ನೀಡುವಂತೆ ವಿವಿಧ ಸಚಿವಾಲಯಗಳ ಕಾರ್ಯದರ್ಶಿಗಳಿಗೆ ಸೂಚಿಸಲಾಗಿದೆ ಎಂದು ತಿಳಿದುಬಂದಿದೆ.

ಪೌರತ್ವ ಕಾಯ್ದೆ ವಿರುದ್ಧ ದೇಶದಲ್ಲಿ ವ್ಯಾಪಕ ಪ್ರತಿಭಟನೆಗಳು ನಡೆಯುತ್ತಿದೆ. ಇದರ ನಡುವೆಯೇ ಈ ಕ್ರಮ ಕೈಗೊಳ್ಳಲಾಗಿದೆ.

error: Content is protected !! Not allowed copy content from janadhvani.com