ಕೆ.ಸಿ.ಎಫ್ ಅಬುಧಾಬಿ ವತಿಯಿಂದ “ಸ್ವಸ್ಥ ಜಗತ್ತಿನ ಪ್ರವಾದಿ” ಎಂಬ ಧೇಯ್ಯ ವಾಕ್ಯದಲ್ಲಿ ನಡೆಯುವ ಗ್ರಾಂಡ್ ಮೀಲಾದ್ ಸಮಾವೇಶ ಇಂದು ಸಂಜೆ 6:30 ಕ್ಕೆ ಝೋಮ್ ಆನ್ಲೈನ್ ಮುಖಾಂತರ ಗ್ರಾಂಡ್ ಮೀಲಾದ್ ಸ್ವಾಗತ ಸಮೀತಿ ಚೇರ್ಮೆನ್ ಹಾಜಿ!ಮುಹಮ್ಮದಲಿ ಬ್ರೈಟ್ ಮಾರ್ಬಲ್ ಇವರ ಅಧ್ಯಕ್ಷತೆಯಲ್ಲಿ ನಡೆಯಲಿದೆ.
ಪ್ರಸುತ ಗ್ರಾಂಡ್ ಮೀಲಾದ್ ಸಮಾವೇಶವು ಸೆಯ್ಯದ್ ಕುಟುಂಬದ ಕಣ್ಮಣಿಯಾದ ಸೆಯ್ಯದ್ ಶಿಹಾಬುದ್ದೀನ್ ಸಖಾಫಿ ಅಲ್-ಹೈದ್ರೋಸ್ ಕಿಲ್ಲೂರ್ ತಂಘಳರ ದುಃವಾ ನೇತೃತ್ವದಲ್ಲಿ ಜರಗುವಾಗ ಮುಖ್ಯ ಪ್ರಭಾಷಕರಾಗಿ ಪ್ರಖ್ಯಾತ ಪಂಡಿತರೂ ವಾಗ್ಮಿಯೂ,ಕುಟ್ಯಾಡಿ ಸಿರಾಜುಲ್ ಹುದಾ ಶಿಲ್ಪಿ ಮೌಲಾನ!ಪೇರೋಡ್ ಅಬ್ದುರಹ್ಮಾನ್ ಸಖಾಫಿ ಉಸ್ತಾದ್ ಕಾರ್ಯಕ್ರಮದಲ್ಲಿ ಮುಖ್ಯ ಪ್ರಭಾಷಣ ನಡೆಸಲಿರುವರು,ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಸೆಯ್ಯದ್ ಮಿಸ್ಬಾಹಿ ತಂಘಳ್ ಹಾಗು ಕೆ.ಸಿ.ಎಫ್ ಅಂತರಾಷ್ಟ್ರೀಯ ಮತ್ತು ರಾಷ್ಟ್ರೀಯ ನಾಯಕರು ಭಾಗವಯಿಸಲಿರುವರೆಂದು ಗ್ರಾಂಡ್ ಮೀಲಾದ್ ಸ್ವಾಗತ ಸಮಿತಿಯು ಪ್ರಕಟಣೆಯಲ್ಲಿ ತಿಳಿಸಿದೆ.







