janadhvani

Kannada Online News Paper

ಪ್ರವಾದಿ(ಸ.ಅ)ರ ಪ್ರಕೀರ್ತನೆ ಮುಸಲ್ಮಾನರ ಕರ್ತವ್ಯ-ಇರ್ಷಾದ್ ಸಖಾಫಿ ಬೊಳ್ಳಾಯಿ

ಪುತ್ತೂರು : ಪುಣ್ಯ ರಬೀವುಲ್ ಅವ್ವಲ್ ತಿಂಗಳನ್ನು ಗೌರವಿಸಿ ಹಾಗೂ ಪ್ರವಾದಿ ಮುಹಮ್ಮದ್ ಪೈಗಂಬರ್ ಸಲ್ಲಲ್ಲಾಹು ಅಲೈಹಿವ ಸಲ್ಲಮರ ಜನ್ಮ ತಿಂಗಳಿನಲ್ಲಿ ನಾವು ಪ್ರವಾದಿವರ್ಯರನ್ನು ಸಂತೋಷಗೊಳಿಸಿದರೆ ನಮ್ಮ ಇಹಪರದಲ್ಲಿ ವಿಜಯ ಸಾಧಿಸಬಹುದು ಎಂದು ಇರ್ಷಾದ್ ಸಖಾಫಿ ಬೊಳ್ಳಾಯಿ(ಮುದರ್ರಿಸ್ ಮುಹ್ಯಿಸ್ಸುನ್ನ ದರ್ಸ್ ಕೆಮ್ಮಾಯಿ) ಹೇಳಿದರು.

ನಮಗೆ ಸಾಧ್ಯವಾಗುವ ರೀತಿಯಲ್ಲಿ ಲೋಕ ಪ್ರವಾದಿ ಸಲ್ಲಲ್ಲಾಹು ಅಲೈಹಿವ ಸಲ್ಲಮರ ಜನ್ಮದಿನಾಚರಣೆಯನ್ನು ಕೊಂಡಾಡಬೇಕು ಎಂದು ಬದ್ರಿಯಾ ಜುಮಾ ಮಸೀದಿ ಕೆಮ್ಮಾಯಿ ಯಲ್ಲಿ ಜುಮಾ ನಮಾಝಿನ ಬಳಿಕದ ಭಾಷಣದಲ್ಲಿ ಅವರು ಹೇಳಿದರು.