ತಿರುವನಂತಪುರ: ಕೋವಿಡ್ ಲಸಿಕೆ ಪ್ರಮಾಣಪತ್ರದಲ್ಲಿ ಪ್ರಧಾನಿಯವರ ಚಿತ್ರವನ್ನು ಸೇರಿಸುತ್ತಿರುವ ಕುರಿತು ಕೇರಳ ಹೈಕೋರ್ಟ್ ಕೇಂದ್ರ ಸರ್ಕಾರದಿಂದ ವಿವರಣೆ ಕೇಳಿದೆ.
ಕೊಟ್ಟಾಯಂನ ಕಾಡುತುರುತಿ ಮೂಲದ ಪೀಟರ್ ಮಾಳಿಪ್ಪರಂಬಿಲ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ನ್ಯಾಯಾಲಯ ನಡೆಸುತ್ತಿತ್ತು. ಅರ್ಜಿಯ ಪ್ರಕಾರ, ಕೋವಿಡ್ ವಿರುದ್ಧದ ರಾಷ್ಟ್ರೀಯ ಅಭಿಯಾನವು ಪ್ರಧಾನಿ ನರೇಂದ್ರ ಮೋದಿಯವರ ಅಭಿಯಾನವಾಗಿ ಮಾರ್ಪಟ್ಟಿದೆ. ಹಣ ಪಾವತಿಸಿ ಲಸಿಕೆ ಪಡೆದ ಪ್ರಮಾಣಪತ್ರದಲ್ಲಿ ಪ್ರಧಾನಿಯ ಚಿತ್ರವನ್ನು ಅಂಟಿಸುವುದು ಮೂಲಭೂತ ಹಕ್ಕುಗಳ ಉಲ್ಲಂಘನೆಯಾಗಿದೆ ಎಂದು ಅರ್ಜಿಯಲ್ಲಿ ಆರೋಪಿಸಲಾಗಿದೆ.
ಪ್ರಧಾನಮಂತ್ರಿಯವರ ಚಿತ್ರವನ್ನು ಎಲ್ಲಾ ಸಾರ್ವಜನಿಕ ಸ್ಥಳಗಳಲ್ಲಿ ಅಂಟಿಸಲಾಗಿದೆ. ಅರ್ಜಿಯ ಪ್ರಕಾರ, ಮೋದಿ ದೇಶದ ಹಣವನ್ನು ದುರುಪಯೋಗ ಪಡಿಸಿಕೊಂಡು ಒನ್ ಮ್ಯಾನ್ ಶೋ ಆಡುತ್ತಿದ್ದಾರೆ.
ಲಸಿಕೆ ಪ್ರಮಾಣಪತ್ರದಲ್ಲಿ ಮೋದಿಯ ಚಿತ್ರ ಸೇರಿಸುವುದನ್ನು ವಿರೋಧ ಪಕ್ಷಗಳು ತೀವ್ರ ವಿರೋಧವನ್ನು ಪ್ರಕಟಿಸಿತ್ತು.
ಇದರ ಹೊರತಾಗಿ, ವಿದೇಶಕ್ಕೆ ತೆರಳುವ ಭಾರತೀಯರು ಅಲ್ಲಿನ ಕಾನೂನಿನ ಅಡಚಣೆಯನ್ನೂ ಎದುರಿಸುವಂತಾಗಿದೆ. ಲಸಿಕೆ ಪ್ರಮಾಣಪತ್ರದಲ್ಲಿನ ಚಿತ್ರವನ್ನು ನೋಡಿ, ಅನೇಕ ಭಾರತೀಯರನ್ನು ಸೋಗಿನ ನೆಪದಲ್ಲಿ ವಿವಿಧ ವಿದೇಶಿ ವಿಮಾನ ನಿಲ್ದಾಣಗಳಲ್ಲಿನ ಉದ್ಯೋಗಸ್ಥರು ದೀರ್ಘ ಸಮಯ ತಡೆದು ನಿಲ್ಲಿಸಿದ ಪ್ರಕರಣಗಳು ನಡೆದಿದೆ.