janadhvani

Kannada Online News Paper

ಸೌದಿ: ಅರ್ಜಿ ಸಲ್ಲಿಸಿದ ಮೂರೇ ದಿನಗಳಲ್ಲಿ ಫ್ಯಾಮಿಲಿ ಸಂದರ್ಶಕ ವೀಸಾ ಲಭ್ಯ

ರಿಯಾದ್ |ಸೌದಿ ಅರೇಬಿಯಾದಲ್ಲಿ ಕುಟುಂಬ ಭೇಟಿ ವೀಸಾಗಳನ್ನು (family visit visa) ಮೂರೇ ದಿನಗಳಲ್ಲಿ ನೀಡಲಾಗುವುದು ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಘೋಷಿಸಿದೆ.

ಸಚಿವಾಲಯದ ಇ-ಪೋರ್ಟಲ್‌ನಲ್ಲಿ ಅರ್ಜಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಿದವರಿಗೆ ವೀಸಾಗಳು ಸುಲಭವಾಗಿ ಲಭ್ಯವಾಗಲಿದೆ. ಅರ್ಜಿದಾರರ, ಪತ್ನಿ, ಮಕ್ಕಳು, ತಂದೆ ಮತ್ತು ತಾಯಿಯ ಹತ್ತಿರದ ಸಂಬಂಧಿಗಳನ್ನು ಭೇಟಿ ವೀಸಾಕ್ಕೆ ಪರಿಗಣಿಸಲಾಗುತ್ತದೆ.

ಕುಟುಂಬ ಭೇಟಿ ವೀಸಾ ಪಡೆಯಲು ಕೆಲವೊಮ್ಮೆ ವಿಳಂಬವಾಗುತ್ತಿದೆ ಎಂಬ ದೂರಿನ ಹಿನ್ನೆಲೆಯಲ್ಲಿ ಸಚಿವಾಲಯದಿಂದ ಈ ಸ್ಪಷ್ಟನೆ ಲಭಿಸಿದೆ. ಸಚಿವಾಲಯವು ಸೂಚಿಸಿದ ಕಾರ್ಯವಿಧಾನಗಳನ್ನು ಪೂರ್ಣಗೊಳಿಸಿ,ಸಲ್ಲಿಸಿದ ಅರ್ಜಿಗಳ ಮೇಲೆ ಮೂರು ಕೆಲಸದ ದಿನಗಳಲ್ಲಿ ವೀಸಾಗಳನ್ನು ನೀಡಲಾಗುವುದು ಎಂದು ಸಚಿವಾಲಯ ಹೇಳಿದೆ.

ವೀಸಾ ಅರ್ಜಿದಾರರು ಪಾಲಿಸಬೇಕಾದ ನಿಯಮಗಳು ಮತ್ತು ಷರತ್ತುಗಳು.

  • ಅರ್ಜಿದಾರರು ಕೆಲಸದ ವೀಸಾದಲ್ಲಿರಬೇಕು.
  • ಮೂರು ತಿಂಗಳಿಗಿಂತ ಕಡಿಮೆಯಿಲ್ಲದೆ ಇಖಾಮಾ ಮಾನ್ಯವಾಗಿರಬೇಕು.
  • ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಈ ಪೋರ್ಟಲ್ ಮೂಲಕ ಅರ್ಜಿಯನ್ನು ಸಲ್ಲಿಸಬೇಕು.
  • ಅರಬ್ಬೇತರ ದೇಶಗಳ ವಿದೇಶಿಯರು ಭೇಟಿ ನೀಡುವವರ ಹೆಸರನ್ನು ಹೊರತುಪಡಿಸಿ ಇತರ ಮಾಹಿತಿಯನ್ನು ಅರೇಬಿಕ್‌ನಲ್ಲಿ ಭರ್ತಿ ಮಾಡಬೇಕು.
  • ಚೇಂಬರ್‌ನ ಎಲೆಕ್ಟ್ರಾನಿಕ್ ಸೇವೆಯ ಮೂಲಕ ಸಿದ್ಧಪಡಿಸಿದ ಅರ್ಜಿಯನ್ನು ದೃಢೀಕರಿಸಬೇಕು.

ಮುಂತಾದ ಷರತ್ತುಗಳಿಗೆ ಒಳಪಟ್ಟು ಸಲ್ಲಿಸಿದ ಅರ್ಜಿಗಳ ಮೇಲೆ ಮೂರು ದಿನಗಳಲ್ಲಿ ವೀಸಾಗಳನ್ನು ನೀಡಲಾಗುತ್ತದೆ.
ಪ್ರಸ್ತುತ, ಎಲ್ಲಾ ರೀತಿಯ ವೃತ್ತಿಗಳಿಗೆ ಕುಟುಂಬ ಭೇಟಿ ವೀಸಾಗಳನ್ನು ನೀಡಲಾಗುತ್ತದೆ.

error: Content is protected !! Not allowed copy content from janadhvani.com