janadhvani

Kannada Online News Paper

ನಾಳೆ ಮುದುಂಗಾರು ಕಟ್ಟೆಯಲ್ಲಿ ತಾಜುಲ್ ಉಲಮಾ ಅನುಸ್ಮರಣೆ

ಬಂಟ್ವಾಳ:ಮದನೀಸ್ ಅಸೋಸಿಯೇಶನ್ ಬಂಟ್ವಾಳ ತಾಲೂಕು ಸಮಿತಿ ಇದರ ವತಿಯಿಂದ ಎಟ್ಟಿಕ್ಕುಳಂ ನಲ್ಲಿ ನವೆಂಬರ್ ನಲ್ಲಿ ನಡೆಯುವ ತಾಜುಲ್ ಉಲಮಾ ಉಸ್ತಾದರ ಉರೂಸ್ ಪ್ರಯುಕ್ತ ನಾಳೆ(ಅಕ್ಟೋಬರ್ 5 ಮಂಗಳವಾರ)ಬೆಳಿಗ್ಗೆ ಹತ್ತು ಗಂಟೆಗೆ ಮುದುಂಗಾರು ಕಟ್ಟೆ ಹಯಾತುಲ್ ಇಸ್ಲಾಮ್ ಜುಮಾ ಮಸೀದಿಯಲ್ಲಿ ತಾಜುಲ್ ಉಲಮಾ ಅನುಸ್ಮರಣೆ ನಡೆಯಲಿದೆ.

ದುವಾ ನೇತೃತ್ವ ಸಯ್ಯಿದ್ ಹಬೀಬುಲ್ಲ ತಂಙಳ್ ಪೆರುವಾಯಿ, ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮದನೀಸ್ ಬಂಟ್ವಾಳ ಸಮಿತಿ ಅಧ್ಯಕ್ಷರಾದ ಬಹು ಸಲೀಂ ಮದನಿ ಬೈರಿಕಟ್ಟೆ ವಹಿಸಲಿದ್ದಾರೆ .
ಸಭೆಯನ್ನು ಕೇಂದ್ರ ಮದನೀಸ್ ಪ್ರಧಾನ ಕಾರ್ಯದರ್ಶಿ ಅಬ್ದುರ್ರಹ್ಮಾನ್ ಮದನಿ ಜೆಪ್ಪು ಉದ್ಘಾಟಿಸಲಿದ್ದಾರೆ.
ಕೇಂದ್ರ ಮದನೀಸ್ ಉಪಾಧ್ಯಕ್ಷ ಬಶೀರ್ ಮದನಿ ಕೂಳೂರು ಅನುಸ್ಮರಣೆ ಭಾಷಣ ಮಾಡಲಿದ್ದಾರೆ ಎಂದು ಬಂಟ್ವಾಳ ಮದನೀಸ್ ಪ್ರ.ಕಾರ್ಯದರ್ಶಿ ಅಕ್ಬರ್ ಅಲಿ ಮದನಿ ಆಲಂಪಾಡಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.