janadhvani

Kannada Online News Paper

ತವಕ್ಕಲ್ನಾ ಆಪ್ ಒಂದೇ ಸಮಯದಲ್ಲಿ ಎರಡು ಫೋನ್‌ಗಳಲ್ಲಿ ಕಾರ್ಯನಿರ್ವಹಿಸುವುದಿಲ್ಲ

ರಿಯಾದ್ :ಸೌದಿ ಆರೋಗ್ಯ ಸಚಿವಾಲಯದ ಮಾಹಿತಿಯನ್ನು ಒಳಗೊಂಡಿರುವ ತವಕ್ಕಲ್ನಾ ಆಪ್ ಒಂದೇ ಸಮಯದಲ್ಲಿ ಎರಡು ಫೋನ್‌ಗಳಲ್ಲಿ ಕಾರ್ಯನಿರ್ವಹಿಸುವುದಿಲ್ಲ. ವಿಪಿಎನ್ ಬಳಕೆದಾರರ ಫೋನ್‌ಗಳಲ್ಲೂ ಅಪ್ಲಿಕೇಶನ್ ಕಾರ್ಯನಿರ್ವಹಿಸುವುದಿಲ್ಲ ಎಂದು ಆಪ್ ಡೆವಲಪರ್‌ಗಳು ಸ್ಪಷ್ಟಪಡಿಸಿದ್ದಾರೆ.

‘ತವಕ್ಕಲ್ನಾ’ ಸೌದಿ ಅರೇಬಿಯಾದ ಜನರ ವೈಯಕ್ತಿಕ ಮಾಹಿತಿಯನ್ನು ಒಳಗೊಂಡಿರುವ ಒಂದು ಅಪ್ಲಿಕೇಶನ್ ಆಗಿದೆ. ತುರ್ತು ಸಂದರ್ಭದಲ್ಲಿ ಎರಡನೇ ಫೋನಿನಲ್ಲಿ ತವಕ್ಕಲ್ನ ಬಳಸಬಹುದು. ಇದಕ್ಕಾಗಿ, ನೋಂದಾಯಿತ ಫೋನ್‌ನಲ್ಲಿ ಬರುವ OTP ಬಳಸಿ ನೋಂದಣಿಯನ್ನು ಪೂರ್ಣಗೊಳಿಸಬಹುದು. ಇದಕ್ಕೂ ಮೊದಲು ನೀವು ಮೊದಲ ಫೋನಿನಿಂದ ಸೈನ್ ಔಟ್ ಮಾಡಬೇಕಾಗುತ್ತದೆ. ಫೋನ್ ನಂಬರ್ ಇಲ್ಲದ ಫೋನ್ ಗಳಲ್ಲೂ ತವಕ್ಕಲ್ನ ಬಳಸಬಹುದು.

ಆದಾಗ್ಯೂ, ಕೆಲವು ಕಾರಣಗಳಿಂದ ತವಾಕ್ಕಲ್ನಾವನ್ನು ತೆರೆಯಲು ಸಾಧ್ಯವಾಗದಿದ್ದರೆ, ನೋಂದಾಯಿತ ದೂರವಾಣಿ ಸಂಖ್ಯೆಯ ಮೂಲಕ ಮತ್ತೆ OTP ಅನ್ನು ಪಡೆಯುವುದು ಅಗತ್ಯವಾಗಿರುತ್ತದೆ. ಇದರ ಜೊತೆಗೆ, ವಿಪಿಎನ್ ಬಳಸುವ ಫೋನ್‌ಗಳಲ್ಲಿ ಆಪ್ ಕಾರ್ಯನಿರ್ವಹಿಸುವುದಿಲ್ಲ.ಆಪ್ ಡೇಟಾದ ದುರುಪಯೋಗವನ್ನು ತಡೆಯುವ ನಿಟ್ಟಿನಲ್ಲಿ VPN ಬಳಸುವಾಗ ತವಕ್ಕಲ್ನಾ ಕೆಲಸ ಮಾಡುವುದಿಲ್ಲ.

ಪೂರ್ವ ಅನುಮತಿಯಿಲ್ಲದೆ ವಿಪಿಎನ್ ಬಳಸುವುದು ಸೌದಿ ಅರೇಬಿಯಾದಲ್ಲಿ ಕಾನೂನುಬಾಹಿರ. ಅಸಹಜ ಮತ್ತು ಕಾನೂನುಬಾಹಿರ ವಿಪಿಎನ್ ನ ಬಳಕೆದಾರರಿಂದ ಮೊಬೈಲ್ ಸೇವಾ ಪೂರೈಕೆದಾರರು ಮಾಹಿತಿಯನ್ನು ಸಂಗ್ರಹಿಸುತ್ತಾರೆ. ಕಾನೂನುಬಾಹಿರ ಕ್ರಮವನ್ನು ಪೊಲೀಸರಿಗೆ ಒಪ್ಪಿಸಲಾಗುವುದು.

error: Content is protected !! Not allowed copy content from janadhvani.com