janadhvani

Kannada Online News Paper

ಎಸ್ಸೆಸ್ಸೆಫ್ ಸುಳ್ಯ ಸೆಕ್ಟರ್: ಪ್ರತಿಭೋತ್ಸವ ಸಮಿತಿ ಚೇರ್ಮನ್ ಆಗಿ ಬಶೀರ್ ಕಲ್ಲುಮುಟ್ಲು ಆಯ್ಕೆ

ಕರ್ನಾಟಕ ರಾಜ್ಯ ಸುನ್ನಿ ಸ್ಟೂಡೆಂಟ್ ಫೆಡರೇಶನ್ (ಎಸ್ಸೆಸ್ಸೆಫ್) ಇದರ ಅಧೀನದಲ್ಲಿ ಎರಡು ವರ್ಷಕ್ಕೊಮ್ಮೆ ಶಾಖೆ ಯಿಂದ ರಾಜ್ಯ ಮಟ್ಟದ ವರೆಗೆ ನಡೆಯುವ ಕಲಾ-ಸಾಹಿತ್ಯ ಸ್ಪರ್ಧೆ ‘ಎಸ್ಸೆಸ್ಸೆಫ್ ಪ್ರತಿಭೋತ್ಸವ’ ಇದರ ಸುಳ್ಯ ಸೆಕ್ಟರ್ ಸಮಿತಿಯನ್ನು, ಸೆಕ್ಟರ್ ಅಧ್ಯಕ್ಷರಾದ ಸಿದ್ದೀಖ್ ಬಿ ಎ ಯವರ ಅಧ್ಯಕ್ಷತೆಯಲ್ಲಿ ನಡೆದ ಸೆಕ್ಟರ್ ಸಭೆಯಲ್ಲಿ ರಚನೆಮಾಡಲಾಯಿತು.

ಚೇರ್ಮನ್ ಆಗಿ ಬಶೀರ್ ಕಲ್ಲುಮುಟ್ಲು, ಕನ್ವೀನರ್ ಆಗಿ ಮಶೂದ್ ಹಿಮಮಿ ಏಣಾವರ, ಕೋಶಾಧಿಕಾರಿ ಯಾಗಿ ಅಶ್ರಫ್ ಚಡಾವು, ವೈಸ್ ಚೇರ್ಮನ್ ಆಗಿ ಶಾಕಿರ್ ಮೊಗರ್ಪಣೆ, ಶಾಹಿದ್ ಇರ್ಫಾನ್ ಏಣಾವರ, ಜೊ.ಕನ್ವೀನರ್ ಆಗಿ ಶರೀಫ್ ಜಯನಗರ,ಆಸಿಫ್ ಮೊಗರ್ಪಣೆ,ಇಜಾಝ್ ಗೂನಡ್ಕ ಇವರನ್ನು ಆಯ್ಕೆಮಾಡಲಾಯಿತು.