janadhvani

Kannada Online News Paper

ನಾಳೆ ಉಡುಪಿ ಜಿಲ್ಲಾ ಎಸ್ಸೆಸ್ಸೆಫ್ ನಿಂದ ಪ್ರತಿಭೋತ್ಸವ ಮಾಹಿತಿ ಕಾರ್ಯಾಗಾರ

ಉಡುಪಿ, ಸೆ.18: ಎಸ್ಸೆಸ್ಸೆಫ್ ಕರ್ನಾಟಕ ರಾಜ್ಯ ಸಮಿತಿಯು ಎರಡು ವರ್ಷಕ್ಕೊಮ್ಮೆ‌ ನಡೆಸಿಕೊಂಡು ಬರುತ್ತಿರುವ ಪ್ರತಿಭಾನ್ವೇಷಣೆಯ ಪ್ರತಿಭೋತ್ಸವದ ಮಾಹಿತಿ ಕಾರ್ಯಾಗಾರವು ಸೆಪ್ಟೆಂಬರ್ 19 ರಂದು ಆದಿತ್ಯವಾರ ಮಧ್ಯಾಹ್ನ 2 ಗಂಟೆಗೆ ಉಡುಪಿ ಅಜ್ಜರಕಾಡು ಸುನ್ನೀ ಕಾರ್ಯಾಲಯದಲ್ಲಿ ನಡೆಯಲಿದೆ.

ಪ್ರತಿಭೋತ್ಸವ ಸಮಿತಿ ಚರ್ಮ್ಯಾನ್ ಕೆ.ಎಸ್.ಎಮ್ ಮನ್ಸೂರ್ ಉಡುಪಿ ಯವರ ಅಧ್ಯಕ್ಷತೆಯಲ್ಲಿ ನಡೆಯುವ ಕಾರ್ಯಾಗಾರ ಎಸ್ಸೆಸ್ಸೆಫ್ ಉಡುಪಿ ಜಿಲ್ಲಾಧ್ಯಕ್ಷರಾದ ಅಹ್ಮದ್ ಶಬೀರ್ ಸಖಾಫಿಯವರು ಉದ್ಘಾಟಿಸುವರು.
ಜಿಲ್ಲೆಯ ಪ್ರ.ಕಾರ್ಯದರ್ಶಿ ಎಮ್.ಕೆ ಇಬ್ರಾಹಿಂ ಮಜೂರು ಹಾಗೂ ಜಿಲ್ಲಾ ಕಾರ್ಯಕಾರಿ ಸಮಿತಿ ಸದಸ್ಯರು ಉಪಸ್ಥಿತರಿರುವರು.

ಡಿವಿಷನ್ ಗಳ ಅಧ್ಯಕ್ಷರು, ಪ್ರ.ಕಾರ್ಯದರ್ಶಿ, ಕೋಶಾಧಿಕಾರಿ ಹಾಗೂ ಪ್ರತಿಭೋತ್ಸವ ಸಮಿತಿ ಚರ್ಮ್ಯಾನ್, ಕನ್ವೀನರ್ ಸೇರಿದಂತೆ ಎಲ್ಲಾ‌ ಸದಸ್ಯರು ಭಾಗವಹಿಸುವರು ಎಂದು ಕಲ್ಚರಲ್ ಕೌನ್ಸಿಲ್ ಕಾರ್ಯದರ್ಶಿ ನಿಝಾಂ ಪಡುಕೆರೆ ಪ್ರಕಟಣೆ ತಿಳಿಸಿದೆ.