janadhvani

Kannada Online News Paper

ಸಾವಿನೊಂದಿಗೆ ಆಟ ಬೇಡ-ಸೌದಿ ರಾಜಕುಮಾರನಿಗೆ ಎಚ್ಚರಿಕೆ ನೀಡಿದ ಇರಾನ್

ಟೆಹ್ರಾನ್: ಸೌದಿ ರಾಜಕುಮಾರ ಮೊಹಮ್ಮದ್ ಬಿನ್ ಸಲ್ಮಾನ್‌ರನ್ನು ಇರಾನ್ ಕಟು ಭಾಷೆಯಲ್ಲಿ ಟೀಕಿಸಿದೆ. ಇರಾನ್ ವಿರುದ್ಧ ಬಲವಾದ ದಿಗ್ಘಬಂಧನವನ್ನು ಹೇರದಿದ್ದಲ್ಲಿ ಹತ್ತು ಅಥವಾ ಹದಿನೈದು ವರ್ಷಗಳಲ್ಲಿ ಆ ದೇಶದೊಂದಿಗೆ ಒಂದು ಯುದ್ಧ ನಡೆಯುವ ಸಾಧ್ಯತೆ ಇದೆ ಎಂದು ರಾಜಕುಮಾರ ಸಲ್ಮಾನ್ ನೀಡಿರುವ ಹೇಳಿಕೆಗೆ ಇರಾನ್ ಪ್ರತಿಕ್ರಿಯೆ ನೀಡುತ್ತಾ ಈ ಹೇಳಿಕೆ ನೀಡಿದೆ.
ಸಾವಿನೊಂದಿಗೆ ಆಟ ಬೇಡ, ಇರಾನ್‌ನ ನ್ನು ಪಾಠಕಳಿಸ ಬಂದ ಸದ್ದಾಂ ಹುಸೈನ್‌ರಿಗೆ ಏನಾಯ್ತು ಎಂಬುದರ ಬಗ್ಗೆ ರಾಜಕುಮಾರನಿಗೆ ಹೇಳಿಕೊಡುವಂತೆ ವಿದೇಶಾಂಗ ಸಚಿವಾಲಯದ ವಕ್ತಾರ ಬಹ್ರಮ್ ಖಾಸಿಮಿ ಸೌದಿ ಅಧಿಕಾರಿಗಳನ್ನು ನೆನಪಿಸಿದರು. ಯುದ್ಧ ಏನೆಂದು ಅವರಿಗೆ ತಿಳಿದಿಲ್ಲ. ಅವರು ಇತಿಹಾಸವನ್ನು ಕಲಿಯಲೂ ಇಲ್ಲ. ಅಥವಾ ಒಬ್ಬ ಒಳ್ಳೆಯ ವ್ಯಕ್ತಿಯೊಂದಿಗೆ ಈ ಕುರಿತು ಮಾತನಾಡಲೂ ಇಲ್ಲ ಎಂದು ಅವರು ಹೇಳಿದರು.

ಇರಾನ್ ಜೊತೆ ಮಿಲಿಟರಿ ಕಾರ್ಯಾಚರಣೆಯನ್ನು ತಪ್ಪಿಸಲು, ಆ ದೇಶದ ಮೇಲೆ ಬಲವಾದ ನಿರ್ಬಂಧಗಳನ್ನು ವಿಧಿಸಬೇಕು. ಅದರಲ್ಲಿ ಪರಾಭವಗೊಂಡರೆ ಹತ್ತು ಅಥವಾ ಹದಿನೈದು ವರ್ಷಗಳಲ್ಲಿ ಯುದ್ಧಕ್ಕೆ ಸಾಧ್ಯತೆ ಇದೆ ಎಂದು ವಾಲ್ ಸ್ಟ್ರೀಟ್ ಜರ್ನಲ್‌ಗೆ ನೀಡಿದ ಸಂದರ್ಶನದಲ್ಲಿ ಕಿಂಗ್ ಸಲ್ಮಾನ್ ಅವರು ವ್ಯಕ್ತಪಡಿಸಿದ್ದರು.

ಮಧ್ಯ ಪ್ರಾಚ್ಯ ಪ್ರದೇಶದಲ್ಲಿ ಇರಾನ್‌ಗೆ ಹೆಚ್ಚುತ್ತಿರುವ ಪ್ರಭಾವವದ ಕುರಿತು ಈ ಹಿಂದೆಯೇ ಸೌದಿ ಎಚ್ಚರಿಕೆ ನೀಡಿತ್ತು.
2015 ರಲ್ಲಿ ನಡೆದ ಇರಾನ್ ಪರಮಾಣು ಒಪ್ಪಂದವನ್ನು ಸೌದಿ ಭಲವಾಗಿ ವಿರೋಧಿಸಿತ್ತು.

error: Content is protected !! Not allowed copy content from janadhvani.com