janadhvani

Kannada Online News Paper

ಮರಿಕ್ಕಳ: ತಾಜುಲ್ ಫುಖಹಾಅ್ ಬೇಕಲ್ ಉಸ್ತಾದರ ಪ್ರಥಮ ಆಂಡ್ ನೇರ್ಚೆಗೆ ಚಾಲನೆ

ಸೆಪ್ಟೆಂಬರ್ 19 ರಂದು ಮರಿಕ್ಕಳ ಜುಮಾ ಮಸ್ಜಿದ್ ವಠಾರದಲ್ಲಿ ನಡೆಯುವ ಕರ್ನಾಟಕ ಜಂ-ಇಯ್ಯತುಲ್ ಉಲಮಾ ಇದರ ಅಧ್ಯಕ್ಷರೂ, ಹಾಸನ ಚಿಕ್ಕಮಗಳೂರು ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ಹಲವು ಕಡೆ ಖಾಝಿಯಾಗಿದ್ದ ಶೈಖುನಾ ತಾಜುಲ್ ಫುಖಹಾಅ್ ಬೇಕಲ್ ಉಸ್ತಾದ್ ರವರ ಪ್ರಥಮ ಆಂಡ್ ನೇರ್ಚೆಗೆ ದ್ವಜಾರೊಹಣ ಮೂಲಕ ಚಾಲನೆ ನೀಡಲಾಯಿತು.

ಮರಿಕ್ಕಳ ಜಮಾಅತ್ ಅಧ್ಯಕ್ಷರಾದ ಅಬ್ಬಾಸ್ ಕೊಡೆಂಚಿಲ್, ಮರಿಕ್ಕಳ ಜುಮಾ ಮಸ್ಜಿದ್ ಮುದರ್ರಿಸ್ ಅಬ್ಬಾಸ್ ಸಖಾಫಿ ಮಡಿಕೇರಿ, ಪ್ರಧಾನ ಕಾರ್ಯದರ್ಶಿ ಇಸ್ಮಾಯಿಲ್ ಮಾಸ್ಟರ್, ಉಪಾಧ್ಯಕ್ಷರಾದ ಜಲೀಲ್ ಮೊಂಟುಗೋಳಿ, ಕೋಶಾಧಿಕಾರಿ ಹನೀಫ್ ಚಂದಹಿತ್ಲು , ಕಾರ್ಯದರ್ಶಿ ಅಲಿಕುಂಞಿ ಅಗಲ್ತಬೆಟ್ಟು, ಹಮೀದ್ ಎಂ.ಎಚ್, ಅಝರ್ ಅಗಲ್ತಬೆಟ್ಟು, ನರಿಂಗಾನ ಗ್ರಾಮ ಪಂಚಾಯತ್ ಸದಸ್ಯರಾದ ಸಿ ಎಚ್ ಅಬ್ದುಲ್ ರಹಿಮಾನ್ ಚಂದಹಿತ್ಲು ಹಾಗೂ ಇನ್ನಿತರರು ಉಪಸ್ಥಿತರಿದ್ದರು.