janadhvani

Kannada Online News Paper

ಮಜ್ ಮಉಸ್ಸಆದ ದಅ್’ವಾ ಕಾಲೇಜು ಲಾಡಿ: ಝೈನುಲ್ ಆಬಿದೀನ್ ಜಮಲುಲೈಲಿ ಕಾಜೂರು ತಂಙಳ್ ಭೇಟಿ

ಬೆಳ್ತಂಗಡಿ: ಮಜ್ ಮಉಸ್ಸಆದ ದಅ್’ವಾ ಕಾಲೇಜು ಲಾಡಿ ಮಡ್ದಡ್ಕ ಕ್ಕೆ ಅಸ್ಸಯ್ಯಿದ್ KPS ಝೈನುಲ್ ಆಬಿದೀನ್ ಜಮಲುಲೈಲಿ ತಂಙಳ್ ಭೇಟಿ ನೀಡಿದರು.

ಇದೇ ವೇಳೆ, ವಿದ್ಯಾರ್ಥಿಗಳ ಕ್ಯಾಂಟೀನ್ ಹಾಗೂ ಕುಡಿಯುವ ನೀರಿನ ಬೋರ್ವೆಲ್ ವ್ಯವಸ್ಥೆಗಳಿಗೆ ಶಂಕುಸ್ಥಾಪನೆಯನ್ನು ನೆರೆವೇರಿಸಿದ ತಂಙಳ್, ಸಂಸ್ಥೆಯು ಉತ್ತರೋತ್ತರವಾಗಿ ಬೆಳೆದು ನಿಲ್ಲಲಿ, ಸಮಾಜದ ಶಿಕ್ಷಣರಂಗದಲ್ಲಿ ಮಹತ್ತರವಾದ ಶಿಕ್ಷಣ ಕ್ರಾಂತಿಯನ್ನು ಮೂಡಿಸಲಿ ಎಂಬುದಾಗಿ ದುವಾ ಆಶೀರ್ವಚನದೊಂದಿಗೆ ಶುಭ ಹಾರೈಸಿದರು.

ಈ ಸಂದರ್ಭದಲ್ಲಿ ಸಂಸ್ಥೆಯ ಪ್ರಧಾನ ಕಾರ್ಯದರ್ಶಿಗಳಾದ ಕೆ.ಎಚ್. ಸಿರಾಜುದ್ದೀನ್ ಝುಹ್’ರಿ ವೇಣೂರು ಸಂಸ್ಥೆಯ ಟ್ರಸ್ಟಿ ಬದ್ರುದ್ದೀನ್ ಕೆ.ಎಚ್ ಗೋಳಿಯಂಗಡಿ, ಅಬ್ದುಲ್ ಅಝೀಝ್ ಝುಹ್’ರಿ ಕಿಲ್ಲೂರು ಅಲ್ ಫಾಹಿಮ,ಕಾಜೂರು ದರ್ಗಾ ಶರೀಫ್ ಆಡಳಿತ ಮಂಡಳಿ ಸದಸ್ಯ ಹಾಗೂ ದಿಡುಪೆ ಮಸೀದಿಯ ಅಧ್ಯಕ್ಷ ಮೊಹಮ್ಮದ್ ಆಲಿ ದಿಡುಪೆ, ಕಾಜೂರು ಕೇಂದ್ರ ಮದರಸದ ಸದರ್ ಮುಅಲ್ಲಿಮ್ ರಶೀದ್ ಮದನಿ ಇಂದಬೆಟ್ಟು ,
ಅಶ್ರಫ್ ಕಿಲ್ಲೂರು, ಅಲ್ತಾಫ್ ಕಿಲ್ಲೂರು,ಹಸೈನಾರ್ ಕಾಜೂರು ,ಅಶ್ರಫ್ ಲಾಡಿ, ಇತರ ಉಮಾರಾ ನೇತಾರರು ಉಪಸ್ಥಿತರಿದ್ದರು.

ಸಂಸ್ಥೆಯ ಶಿಕ್ಷಣ ವಿಭಾಗದ ನಿರ್ದೇಶಕ ಹಾಗೂ ಸಂಚಾಲಕ ನಾಸಿರ್ ಮಾಸ್ತರ್ ಬಂಡಾಡಿ ಸಂಸ್ಥೆಗೆ ಆಗಮಿಸಿದ ಎಲ್ಲರನ್ನು ಆತ್ಮೀಯವಾಗಿ ಸ್ವಾಗತಿಸಿದರು.