janadhvani

Kannada Online News Paper

ಯುಎಇ: ನಾಳೆಯಿಂದ ಟೂರಿಸ್ಟ್ ವೀಸಾ ಲಭ್ಯ

ಅಬುಧಾಬಿ,ಆ.29: ಯುಎಇ ನಾಳೆಯಿಂದ(ಆಗಸ್ಟ್ 30) ಪ್ರವಾಸಿ ವೀಸಾ ನೀಡಲು ನಿರ್ಧರಿಸಿದೆ. ವಿಶ್ವ ಆರೋಗ್ಯ ಸಂಸ್ಥೆ ಅನುಮೋದಿಸಿದ ಲಸಿಕೆಯನ್ನು ಪಡೆದವರು ಪ್ರವಾಸಿ ವೀಸಾಕ್ಕೆ ಅರ್ಜಿ ಸಲ್ಲಿಸಬಹುದಾಗಿದೆ. ಯುಎಇ ರಾಷ್ಟ್ರೀಯ ವಿಪತ್ತು ನಿರ್ವಹಣಾ ಸಮಿತಿಯು ಇದನ್ನು ಘೋಷಿಸಿದೆ.

ಭಾರತ ಸೇರಿದಂತೆ ಪ್ರಯಾಣ ನಿರ್ಬಂಧಗಳು ಜಾರಿಯಲ್ಲಿರುವ ದೇಶಗಳು ಸೇರಿದಂತೆ ಆಗಸ್ಟ್ 30 ರಿಂದ ವೀಸಾಕ್ಕೆ ಅರ್ಜಿ ಸಲ್ಲಿಸಬಹುದು. ಅವರು ವಿಮಾನ ನಿಲ್ದಾಣದಲ್ಲಿ ರಾಪಿಡ್ ಟೆಸ್ಟ್ ಗೆ ಒಳಗಾಗಬೇಕು.

ವಿಶ್ವ ಆರೋಗ್ಯ ಸಂಸ್ಥೆಯಿಂದ ಅನುಮೋದಿಸಲಾದ ಲಸಿಕೆಯ ಎರಡು ಡೋಸ್ ಪಡೆದವರಿಗೆ ವೀಸಾ ನೀಡಲಾಗುತ್ತದೆ. ಪ್ರಯಾಣಿಕರು ಲಸಿಕೆ ಪ್ರಮಾಣಪತ್ರಗಳನ್ನು ಹೊಂದಿರಬೇಕು, ಅಲ್ ಹುಸೇನ್ ಆಪ್ ನಲ್ಲೂ ನೋಂದಾಯಿಸಿಕೊಳ್ಳಬೇಕು ಎಂದು ವಿಪತ್ತು ನಿರ್ವಹಣಾ ಸಮಿತಿಯು ಹೇಳಿದೆ.

ಯುಎಇಗೆ ವಿವಿಧ ಉದ್ದೇಶಗಳಿಗಾಗಿ ತೆರಳಲು ಕಾಯುತ್ತಿರುವ ಸಾವಿರಾರು ಜನರಿಗೆ ಈ ಘೋಷಣೆಯು ಸಂತಸ ತಂದಿದೆ. ಯುಎಇಯ ಅಧಿಕೃತ ಸುದ್ದಿ ಸಂಸ್ಥೆ ಕೂಡ ಇದನ್ನು ಖಚಿತಪಡಿಸಿದೆ.

error: Content is protected !! Not allowed copy content from janadhvani.com