ಅಲ್ಲಾಹನ ದಾರಿಯಲ್ಲಿ ವಿದ್ಯಾರ್ಜನೆಗೈದು ವಿಶುದ್ಧ ಕು಼ರ್’ಆನ್ ಸಂಪೂರ್ಣವಾಗಿ ಕಂಠ ಪಾಠ ಮಾಡಿ ಹಾಫಿಳ್ ಪದವಿಯನ್ನು ಪಡೆದ ಮುಬಶ್ಶಿರ್ ಎಂಬ ವಿದ್ಯಾರ್ಥಿಯನ್ನು, ಕಳೆದೆರಡು ದಶಕಗಳಿಗೂ ಅಧಿಕವಾಗಿ, ಕನ್ಯಾನ ಪರಿಸರದಲ್ಲಿ ಬಡ, ಅಶಕ್ತ ಹಾಗೂ ನಿರ್ಗತಿಕರ ಆಶಾಕಿರಣವಾಗಿ ಕಾರ್ಯಾಚರಿಸುತ್ತಿರುವ ಕನ್ಯಾನ ಮುಸ್ಲಿಂ ಸೇವಾ ಸಮಿತಿ ವತಿಯಿಂದ 20-08-2021 ಶುಕ್ರವಾರ ಮಗ್ರಿಬ್ ನಮಾಝಿನ ಬಳಿಕ ಕನ್ಯಾನ ರಹ್ಮಾನಿಯಾ ಜುಮಾ ಮಸ್ಜಿದ್ ಸಭಾಂಗಣದಲ್ಲಿ ನಡೆದ ಸರಳ ಸಮಾರಂಭದಲ್ಲಿ ಪ್ರಶಸ್ತಿ ಹಾಗೂ ನಗದು ನೀಡಿ ಸನ್ಮಾನಿಸಿ ಗೌರವಿಸಲಾಯಿತು.
2019-20 ನೇ ಸಾಲಿನಲ್ಲಿ SSLC ಮತ್ತು ದ್ವಿತೀಯ ಪಿಯುಸಿಯಲ್ಲಿ ಅತ್ಯಧಿಕ ಅಂಕ ಗಳಿಸಿದ 8 ವಿದ್ಯಾಥಿ೯ಗಳನ್ನೂ ಪ್ರಶಸ್ತಿ ಪತ್ರ ನೀಡಿ ಅಭಿನಂದಿಸಲಾಯಿತು.
ಸಮಿತಿಯ ಮುಂದಿನ ಆಶಾದಾಯಕ ಬೆಳವಣಿಗೆಗಾಗಿ ಹಾಗೂ ಉನ್ನತ ಸೇವಾ ಚಟುವಟಿಕೆಗಳಿಗಾಗಿ ಟ್ರಸ್ಟ್ ಆಗಿ ನವೀಕರಣಗೊಂಡ ಸಮಿತಿಯ ನಾಮವನ್ನು *ಕನ್ಯಾನ ಮುಸ್ಲಿಂ ಸೇವಾ ಚಾರಿಟೇಬಲ್ ಟ್ರಸ್ಟ್* ಎಂಬುದಾಗಿ ಈ ಸಂದರ್ಭದಲ್ಲಿ ಘೋಷಿಸಲಾಯಿತು.
ಸ್ಥಾಪಕಾಧ್ಯಕ್ಷರಾದ ಅಬ್ದುಲ್ ರಹಿಮಾನ್ ನೆಕ್ಲಾಜೆ, ಧಾರ್ಮಿಕ ಸಲಹೆಗಾರರಾದ ಅಬ್ದುಲ್ ಹಮೀದ್ ಸಖಾಫಿ ಪಾಡಿ, ಹಾಜಿ ಎಂ.ಕೆ.ಮುಹಮದ್ ಕುಂಞ , ಅಶ್ರಫ್ ಸಖಾಫಿ, ಅಝೀಝ್ ಮದನಿ ಮತ್ತು ಹಿರಿಯ ಸದಸ್ಯರುಗಳು ಹಾಗೂ ನೇತಾರರು ಭಾಗವಹಿಸಿದರು.
ಕಾರ್ಯದರ್ಶಿ ನೌಸಿಫ್ ಮೂಡೈಮೂಲೆ ಸ್ವಾಗತಿಸಿ ಅಶ್ರಫ್ ಬಂಡಿತ್ತಡ್ಕ ವಂದಿಸಿದರು.