ರಿಯಾದ್: ಸಾಮಾಜಿಕ ಜಾಲತಾಣದಲ್ಲಿ ಪ್ರವಾದಿಯನ್ನು ನಿಂದಿಸಿದ ಯುವಕನನ್ನು ಬಂಧಿಸಲಾಗಿದೆ. ಪ್ರವಾದಿ ಮತ್ತು ಅವರ ಪತ್ನಿ ಆಯಿಷಾ ಅವರನ್ನು ನಿಂದಿಸಿ, ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಕ್ಕಾಗಿ ಯುವಕನನ್ನು ಬಂಧಿಸಲಾಗಿದೆ ಎಂದು ರಿಯಾದ್ ಪೊಲೀಸ್ ವಕ್ತಾರ ಮೇಜರ್ ಖಾಲಿದ್ ಅಲ್-ಕುರೈದಿಸ್ ಅವರು ಹೇಳಿದ್ದಾರೆ.
30 ವರ್ಷದ ಸೌದಿ ವ್ಯಕ್ತಿಯನ್ನು ಬಂಧಿಸಲಾಗಿದ್ದು, ಆರೋಪಿ ವಿರುದ್ಧದ ಪ್ರಕರಣವನ್ನು ಸಾರ್ವಜನಿಕ ವಿಚಾರಣೆಗೆ ಹಸ್ತಾಂತರಿಸಲಾಗಿದೆ ಎಂದು ರಿಯಾದ್ ಪೊಲೀಸ್ ವಕ್ತಾರರು ತಿಳಿಸಿದ್ದಾರೆ.
ಅಟಾರ್ನಿ ಜನರಲ್ ಶೈಖ್ ಸೌದ್ ಅಲ್-ಮುಜಾಬ್ ಸಂಬಂಧಿತ ಇಲಾಖೆಗೆ ಆರೋಪಿಯನ್ನು ಗುರುತಿಸಿ ಆತನ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದರು.ಇದರ ಬೆನ್ನಲ್ಲೇ ಆರೋಪಿಯನ್ನು ಭದ್ರತಾ ಪಡೆಗಳು ಬಂಧಿಸಿವೆ.
ಸಾಮಾಜಿಕ ಮಾಧ್ಯಮಗಳ ಮೂಲಕ ಧಾರ್ಮಿಕ ಸಂಕೇತಗಳು, ಇಸ್ಲಾಮಿಕ್ ಮೌಲ್ಯಗಳು ಮತ್ತು ಸಾರ್ವಜನಿಕ ಸಂಸ್ಕೃತಿಗೆ ಹಾನಿ ಮಾಡುವುದು ಐದು ವರ್ಷಗಳವರೆಗೆ ಜೈಲು ಶಿಕ್ಷೆ ಮತ್ತು ಮೂರು ಮಿಲಿಯನ್ ರಿಯಾಲ್ ವರೆಗೆ ದಂಡ ವಿಧಿಸಬಹುದಾದ ಅಪರಾಧವಾಗಿದೆ.
ಧಾರ್ಮಿಕ ಮತ್ತು ಸಾಮಾಜಿಕ ಮೌಲ್ಯಗಳನ್ನು ಉಲ್ಲಂಘಿಸುವವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಮತ್ತು ಅಂತಹ ವ್ಯಕ್ತಿಗಳನ್ನು ನ್ಯಾಯಾಲಯದ ಮುಂದೆ ತರುವ ಪ್ರಯತ್ನ ಮುಂದುವರಿಯುತ್ತದೆ ಎಂದು ಪಬ್ಲಿಕ್ ಪ್ರಾಸಿಕ್ಯೂಷನ್ ಮೂಲಗಳು ತಿಳಿಸಿವೆ.
















ಇನ್ನಷ್ಟು ಸುದ್ದಿಗಳು
ಸೌದಿಯಲ್ಲಿ ನಕಲಿ ದಾಖಲೆ ದೃಢೀಕರಣ ಜಾಲ: ಭಾರತೀಯ ರಾಯಭಾರ ಕಚೇರಿಯಿಂದ ಎಚ್ಚರಿಕೆ
ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಇಕ್ಬಾಲ್ ಬಾಳಿಲರಿಗೆ SKSSF ರಾಜ್ಯ ಸಮಿತಿಯಿಂದ ಸನ್ಮಾನ
ಮದೀನಾ ತಲುಪಬೇಕೆಂಬ ತಾಯಿಯ ಕೊನೆಯ ಆಸೆ ಈಡೇರಿತು- ಜನ್ನತುಲ್ ಬಕೀಹ್ನಲ್ಲಿ ಅಂತ್ಯಕ್ರಿಯೆ
ಎಸ್ಐಆರ್ ಪ್ರಕ್ರಿಯೆ ರದ್ದತಿಗೆ ಆಗ್ರಹಿಸಿ ರಾಜ್ಯಾದ್ಯಂತ SKSSF ಬೃಹತ್ ಪ್ರತಿಭಟನೆ
ವಿಮಾನಯಾನ ರದ್ದತಿಯಿಂದ ಅತಂತ್ರರಾದ ಉಮ್ರಾ ಯಾತ್ರಾರ್ಥಿಗಳು- DKSCಯಿಂದ ಮಾನವೀಯ ನೆರವು
ವಲಸಿಗರಿಗೆ ಶುಭ ಸುದ್ದಿ: ಜಿದ್ದಾ–ಕೋಝಿಕ್ಕೋಡ್ ನಡುವೆ ಫ್ಲೈನಾಸ್ ನೇರ ವಿಮಾನ ಸೇವೆ ಆರಂಭ
ಸಮಸ್ತ ಉಪಾಧ್ಯಕ್ಷ ಸಯ್ಯಿದ್ ಅಲಿ ಬಾಫಖಿ ತಂಙಳ್ ವಫಾತ್
ದಕ್ಷಿಣ ಕನ್ನಡ ಮುಸ್ಲಿಮ್ ವೆಲ್ಫೇರ್ ಅಸೋಸಿಯೇಷನ್ ಬಹರೈನ್: ನೂತನ ಪದಾಧಿಕಾರಿಗಳು
ಇಕ್ಬಾಲ್ ಬಾಳಿಲರಿಗೆ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ
ಹಾಲು–ಮೊಸರಿನ ದರ ಏರಿಕೆ: ಪರ್ಯಾಯದ ಹೆಸರಿನಲ್ಲಿ ಕಲಬೆರಕೆಯ ಅಪಾಯ