ಪೆರಾಬೆ,ಆಗಸ್ಟ್.15: ಕರ್ನಾಟಕ ರಾಜ್ಯ ಸುನ್ನೀ ಯುವಜನ ಸಂಘ (SYS) ಕರ್ನಾಟಕ ರಾಜ್ಯ ಸುನ್ನೀ ಸ್ಟೂಡೆಂಟ್ಸ್ ಫಡರೇಶನ್ (SSF ) ಕುಂತೂರು ಯುನಿಟ್ ವತಿಯಿಂದ 75 ನೇ ಸ್ವಾತಂತ್ರ್ಯ ದಿನಾಚರಣೆ ಆಚರಿಸಲಾಯಿತು.
ಅಬ್ದುಲ್ ರಝಾಕ್ ಲತೀಫಿ ಕುಂತೂರು ಹಾಗೂ ಅಬ್ದುಲ್ ಬಾರಿ ಮುಸ್ಲಿಯಾರ್ ಕುಂತೂರು ಸಂದೇಶ ಭಾಷಣ ಮಾಡಿದರು. ಈ ಕಾರ್ಯಕ್ರಮದಲ್ಲಿ SYS ಕುಂತೂರು ಬ್ರಾಂಚ್ ನಾಯಕರಾದ ಅಬ್ಬಾಸ್ ಹಾಜಿ ನೆಕ್ಕರೆ, ಕೆ ಆರ್ ಹಮೀದ್ ಕುಂತೂರು, ಹನೀಫ್ ಮುಡುಪಿನಡ್ಕ, ಅಝೀಝ್ ಮುಸ್ಲಿಯಾರ್, ಅಬ್ದುಲ್ ರಝಾಕ್ ಕೆಳಗಿನ ಪೇಟೆ,ಮುಹಮ್ಮದ್ ಅಶ್ರಫ್ ನೆಕ್ಕರೆ ಹಾಗೂ ಕುಂತೂರು ಯುನಿಟ್ SYS-SSF ಸದಸ್ಯರು ಉಪಸ್ಥಿತರಿದ್ದರು.







