janadhvani

Kannada Online News Paper

ಮುನವ್ವಿರುಲ್ ಇಸ್ಲಾಂ ಮದರಸ ಬಂಡಸಾಲೆ- ಸ್ವಾತಂತ್ರ್ಯ ದಿನಾಚರಣೆ

ಮಂಜನಾಡಿ: ಭಾರತದ ಸ್ವಾತಂತ್ರ್ಯಕ್ಕೆ ಬೇಕಾಗಿ ಕಾರ್ಯಾಚರಿಸಿದ ಹೋರಾಟಗಾರರ ಜಾತ್ಯತೀತತೆಯನ್ನು ದೇಶ ಮಾದರಿ ಮಾಡಬೇಕು ಮತ್ತು ಸರಿಯಾದ ಚರಿತ್ರೆಯನ್ನು ಹೊಸ ತಲೆಮಾರು ಕಲೀಬೇಕು ಎಂದು ಅಬ್ದುಲ್ ಖಾದರ್ ಮುಸ್ಲಿಯಾರ್ ಬಂಡಸಾಲೆ ಹೇಳಿದರು.

ಮುನವ್ವಿರುಲ್ ಇಸ್ಲಾಂ ಮದರಸ ಬಂಡಸಾಲೆ ವಠಾರದಲ್ಲಿ ನಡೆದ 75 ನೇ ಸ್ವಾತಂತ್ರ್ಯ ದಿನ ಕಾರ್ಯಕ್ರಮದಲ್ಲಿ ಅವರು ಸಂದೇಶ ಭಾಷಣ ಮಾಡಿದರು.

ಹಾಜಿ ಇಬ್ರಾಹಿಂ ಬಂಡಸಾಲೆ ಧ್ವಜಾರೋಹನ ನಡೆಸಿದರು. ಕೆ. ಐ. ಆಲಿ ಕುಂಞಿ ಮುನವ್ವಿರುಲ್ ಇಸ್ಲಾಂ ಮದರಸ ಬಂಡಸಾಲೆ ಮುನ್ನುಡಿ ಭಾಷಣ ಮಾಡಿದರು. ಮುಹಮ್ಮದ್ ಶರೀಫ್ ಮದನಿ ಬೆಳ್ತಂಗಡಿ ಅಧ್ಯಾಪಕರು ಮುನವ್ವಿರುಲ್ ಇಸ್ಲಾಂ ಮದರಸ ಬಂಡಸಾಲೆ, ಮುಹಮ್ಮದ್ ಬಷೀರ್ ರಿಯಾದ್ ,ಬಿ.ಎಚ್ ಮುಹಮ್ಮದ್ ಕೆ. ಐ ಅಸ್ರಫ್, ಶೇಕಬ್ಬ ಅಂಗಡಿ,ಎಂ.ಪಿ ಮುಹಮ್ಮದ್, ಎಂ. ಪಿ . ಅಬ್ಬಾಸ್, ಅಬ್ದುಲ್ ರಹ್ಮಾನ್ (ಅದ್ದು) ಬಿ. ಮುಹಮ್ಮದ್,ಮೊದಲಾದವರು ಉಪಸ್ಥಿತರಿದ್ದರು.