ರಿಯಾದ್: ಸೌದಿ ಅರೇಬಿಯಾದಲ್ಲಿ ಲಸಿಕೆ ಹಾಕಿಸಿಕೊಳ್ಳದವರು ಇಂದಿನಿಂದ ಸರ್ಕಾರಿ ಮತ್ತು ಖಾಸಗಿ ಸಂಸ್ಥೆಗಳನ್ನು ಪ್ರವೇಶಿಸುವುದನ್ನು ನಿರ್ಬಂಧಿಸಲಾಗಿದೆ.ಈ ಹಿಂದೆ ಗೃಹ ಸಚಿವಾಲಯವು ತೀರ್ಮಾನಿಸಿದ ನಿರ್ಧಾರವು ನಿನ್ನೆ ಮಧ್ಯರಾತ್ರಿಯಿಂದ ಜಾರಿಗೆ ಬಂದಿದೆ.
ಎಲ್ಲಾ ಸರ್ಕಾರಿ ಮತ್ತು ಖಾಸಗಿ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಲಸಿಕೆಯನ್ನು ಸ್ವೀಕರಿಸಿರಬೇಕು.ಪರಿಣಾಮವಾಗಿ, ಲಸಿಕೆ ಹಾಕಿಸದವರು ಸೌದಿ ಅರೇಬಿಯಾದಲ್ಲಿ ಸಂಚರಿಸಲು ಮತ್ತು ಅಂಗಡಿಗಳಿಗೆ ಪ್ರವೇಶಿಸಲು ಸಾಧ್ಯವಾಗುವುದಿಲ್ಲ.
ಏತನ್ಮಧ್ಯೆ, ಭಾರತದಿಂದ ಲಸಿಕೆ ಪಡೆದ ನಂತರ ಸೌದಿ ಅರೇಬಿಯಾಕ್ಕೆ ಆಗಮಿಸಿದವರು ಲಸಿಕೆ ದಾಖಲೆಯನ್ನು ತವಕ್ಕಲ್ನಾ ಆ್ಯಪ್‌ನಲ್ಲಿ ಅನುಮೋದಿಸಿಲ್ಲ ಎಂದು ಕಳವಳ ವ್ಯಕ್ತಪಡಿಸಿದ್ದಾರೆ. ತವಕ್ಕಲ್ನಾ ಆ್ಯಪ್‌ನಲ್ಲಿ AMMUNE ಸ್ಟಾಟಸ್ ಇರುವವರಿಗೆ ಮಾತ್ರ ಕೆಲಸಕ್ಕೆ ತೆರಳಬಹುದು.