janadhvani

Kannada Online News Paper

ಸೌದಿ: ತವಕ್ಕಲ್ನಾ ಆ್ಯಪ್‌ನಲ್ಲಿ ‘ಸ್ಟಾಟಸ್’ ತಿರುಚಿದ 122 ಮಂದಿ ಬಂಧನ

ರಿಯಾದ್ : ಸೌದಿ ಅರೇಬಿಯಾದಲ್ಲಿ, ತವಕ್ಕಲ್ನಾ ಆ್ಯಪ್‌ನಲ್ಲಿ ಆರೋಗ್ಯ ಸ್ಥಿತಿಯನ್ನು ತಿರುಚಿದ ಕಾರಣಕ್ಕಾಗಿ 122 ಜನರನ್ನು ಬಂಧಿಸಲಾಗಿದೆ. ಹಣ ಪಾವತಿಸಿ, ಆ್ಯಪ್‌ನಲ್ಲಿ ಆರೋಗ್ಯ ಸ್ಥಿತಿಯನ್ನು ಸರಿಪಡಿಸಿದ ಪ್ರಕರಣದಲ್ಲಿ ಈ ಬಂಧನ ಮಾಡಲಾಗಿದೆ.ಸ್ಥಳೀಯರು ಮತ್ತು ವಿದೇಶಿಯರು ಸೇರಿದಂತೆ ಹಣ ಪಡೆದುಕೊಂಡ ಅಧಿಕಾರಿಗಳು ಮತ್ತು ಮಧ್ಯವರ್ತಿಗಳನ್ನು ಬಂಧಿಸಲಾಗಿದೆ.

ಸೌದಿ ಅರೇಬಿಯಾದಲ್ಲಿ ಕೋವಿಡ್ ಪರಿಸ್ಥಿತಿಯಲ್ಲಿರುವ ವ್ಯಕ್ತಿಗಳ ಆರೋಗ್ಯ ಸ್ಥಿತಿಯನ್ನು ಸ್ಪಷ್ಟಪಡಿಸಲು ಕಡ್ಡಾಯಗೊಳಿಸಲಾಗಿರುವ ತವಕ್ಕಲ್ನಾ ಆ್ಯಪ್‌ನ್ನು ತಿರುಚಿದಕ್ಕಾಗಿ ಸ್ಥಳೀಯರು ಮತ್ತು ವಿದೇಶಿಯರನ್ನು ಒಳಗೊಂಡಿರುವ ಈ ಗುಂಪನ್ನು ಬಂಧಿಸಲಾಯಿತು.

ಸೌದಿ ಭ್ರಷ್ಟಾಚಾರ ನಿಗ್ರಹ ಆಯೋಗ ಹೆಚ್ಚಿನ ವಿವರಗಳನ್ನು ಬಿಡುಗಡೆ ಮಾಡಿದೆ. ದಿನಗಳ ಹಿಂದೆ, ಪೂರ್ವ ಪ್ರಾಂತ್ಯದಿಂದ 12 ಜನರ ಗುಂಪನ್ನು ಸೆರೆಹಿಡಿಯಲಾಗಿತ್ತು. ನಂತರದ ತನಿಖೆಯಲ್ಲಿ ಹೆಚ್ಚಿನ ಮಂದಿಯನ್ನು ಬಂಧಿಸಲಾಗಿದೆ.

ಹೊಸದಾಗಿ 122 ಜನರನ್ನು ಬಂಧಿಸಲಾಗಿದೆ. ಹಣವನ್ನು ಪಾವತಿಸಿದರೆ ಅಗತ್ಯಕ್ಕೆ ತಕ್ಕಂತೆ ತವಕ್ಕಲ್ನಾದಲ್ಲಿ ಆರೋಗ್ಯ ಸ್ಥಿತಿಯನ್ನು ಬದಲಾಯಿಸಿ ನೀಡಲಾಗುವುದು ಎಂದು ಅವರು ಸಾಮಾಜಿಕ ಮಾಧ್ಯಮದಲ್ಲಿ ಪ್ರಚಾರಪಡಿಸಿದ್ದರು. ಇದರ ಬೆನ್ನಲ್ಲೇ ಭ್ರಷ್ಟಾಚಾರ ನಿಗ್ರಹ ದಳ ತನಿಖೆ ಆರಂಭಿಸಿದೆ.

error: Content is protected !! Not allowed copy content from janadhvani.com