janadhvani

Kannada Online News Paper

ಲಸಿಕೆ ಬಗ್ಗೆ ಜನಜಾಗೃತಿ ಮೂಡಿಸಲು ಸುನ್ನೀ ಜಮ್‌ ಇಯ್ಯತುಲ್ ಉಲಮಾ ಕರೆ

ಕೋವಿಡ್ ಮಹಾಮಾರಿಯಿಂದ ಸುರಕ್ಷಿತರಾಗಲು ಎಲ್ಲರೂ ಕೋವಿಡ್ ಪ್ರತಿರೋಧ ಲಸಿಕೆಯನ್ನು ಪಡೆಯಬೇಕೆಂದು ಮತ್ತು ಈ ಬಗ್ಗೆ ಜನರ ನಡುವೆ ಜಾಗೃತಿಯನ್ನು ಮೂಡಿಸಬೇಕೆಂದು ಸುನ್ನೀ ಜಮ್ ಇಯ್ಯತುಲ್ ಉಲಮಾ ಕರ್ನಾಟಕ ಕರೆ ನೀಡಿದೆ. ಜಗತ್ತಿನ ಬಹುತೇಕ ರಾಷ್ಟ್ರಗಳು ತಮ್ಮ ಪ್ರಜೆಗಳೆಲ್ಲರಿಗೆ ಪ್ರತಿರೋಧ ಲಸಿಕೆಯನ್ನು ಕೊಡಿಸುವ ಸುಸಜ್ಜಿತ ವ್ಯವಸ್ಥೆಗಳನ್ನು ಮಾಡುತ್ತಿದ್ದು ಲಸಿಕೆ ಬಗ್ಗೆ ತಪ್ಪು ಗ್ರಹಿಕೆಗಳು ಅಗತ್ಯವಿಲ್ಲ.

ಜಾಗತಿಕ ಮಟ್ಟದಲ್ಲಿ ರೋಗವನ್ನು ತಡೆಗಟ್ಟುವ ವೈದ್ಯಲೋಕದ ಪ್ರಯತ್ನದಲ್ಲಿ ಎಲ್ಲರೂ ಕೈಜೋಡಿಸಬೇಕೆಂದೂ ಸಮಾಜಸೇವಕರು, ಸಂಘಟನೆಗಳು ಮುಂದೆ ನಿಂತು ಈ ಬಗ್ಗೆ ಜನರಲ್ಲಿ ಜಾಗೃತಿಯನ್ನು ಮೂಡಿಸಬೇಕೆಂದೂ ಜಮ್ ಇಯ್ಯತುಲ್ ಉಲಮಾ ಅಧ್ಯಕ್ಷ ಖಾಝಿ ಎಂ ಅಬ್ದುಲ್ ಹಮೀದ್ ಮುಸ್ಲಿಯಾರ್ ಮಾಣಿ, ಕಾರ್ಯದರ್ಶಿ ಕೆ ಮಹಮೂದ್ ಮುಸ್ಲಿಯಾರ್ ಎಡಪಾಲ ಕೊಡಗು. ಕೊಠಾಧಿಕಾರಿ ಹುಸೈನ್ ಸಅದಿ ಕೆ ಸಿ ರೋಡ್ ಇವರು ಜಂಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

error: Content is protected !! Not allowed copy content from janadhvani.com