ಬೆಂಗಳೂರು ಜೂ 21: ಪ್ರಸ್ತುತ ಕ್ಯಾಂಪಸ್ ಟ್ರೆಂಡ್ ತಿಳಿಯಲು ಮತ್ತು ಕ್ಯಾಂಪಸ್ ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ರಾಜ್ಯ ಕ್ಯಾಂಪಸ್ ಸಿಂಡಿಕೇಟ್ “Connecting Minds, Creating The Future” ಎಂಬ ಪ್ರಮೇಯ ದೊಂದಿಗೆ ದಿನಾಂಕ 22/06/2021 ರಂದು “ಕ್ಯಾಂಪಸ್ ಟ್ರೆಂಡ್ಸ್” ಆನ್ಲೈನ್ ವೆಬಿನಾರ್ ನಡೆಸಲಿದೆ.
ಸಯ್ಯಿದ್ ಅಲವೀ ತಂಙಳ್ ಕರ್ಕಿ ದುಆಃ ನೆರವೇರಿಸಿ ಈ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ, ಅಧ್ಯಕ್ಷತೆಯನ್ನು ಎಸ್ಸೆಸ್ಸೆಫ್ ರಾಜ್ಯಾಧ್ಯಕ್ಷರಾದ ಅಬ್ದುಲ್ ಲತೀಫ್ ಸಅದಿ ಶಿವಮೊಗ್ಗ ವಹಿಸಲಿದ್ದಾರೆ. ರಾಜ್ಯ ಪ್ರಧಾನ ಕಾರ್ಯದರ್ಶಿ ಇಸ್ಮಾಯಿಲ್ ಮಾಸ್ಟರ್ ಮರಿಕ್ಕಳ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಎಸ್ಸೆಸ್ಸೆಫ್ ರಾಷ್ಟ್ರೀಯ ಕಾರ್ಯದರ್ಶಿ ಯಾಕೂಬ್ ಮಾಸ್ಟರ್ ಕೊಳಕ್ಕೇರಿ, ಕಂವೆರ್ಝ ಇಂಗ್ಲೀಷ್ ಹಬ್ ನ ತರಬೇತುದಾರ ಎ. ಆರ್. ನುಫೈಲ್ ಬೆಂಗಳೂರು ಕಾರ್ಯಕ್ರಮದಲ್ಲಿ ಕ್ಯಾಂಪಸ್ ವಿಷಯಗಳ ಕುರಿತು ಮಾತನಾಡಲಿದ್ದಾರೆ.
ಕ್ಯಾಂಪಸ್ ಸಿಂಡಿಕೇಟ್ ಸದಸ್ಯರಾದ ಮುಹಮ್ಮದ್ ರಖೀಬ್ ಉಡುಪಿ ಸ್ವಾಗತಿಸಿ, ಕ್ಯಾಂಪಸ್ ಸಿಂಡಿಕೇಟ್ ಸದಸ್ಯರಾದ ಸ್ವಫ್ದರ್ ಬೆಂಗಳೂರು ವಂದಿಸಲಿದ್ದಾರೆ. ರಾಜ್ಯ ಕ್ಯಾಂಪಸ್ ಕಾರ್ಯದರ್ಶಿ ಶರೀಫ್ ಕೊಡಗು ಕಾರ್ಯಕ್ರಮದ ನಿರೂಪಣೆ ಮಾಡಲಿದ್ದಾರೆ. ಕ್ಯಾಂಪಸ್ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಈ ಕಾರ್ಯಕ್ರಮದ ಸದುಪಯೋಗ ಪಡೆದುಕೊಳ್ಳಬೇಕು ಎಂದು ರಾಜ್ಯ ಮಾದ್ಯಮ ಕಾರ್ಯದರ್ಶಿ ನವಾಝ್ ಭಟ್ಕಳ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.