janadhvani

Kannada Online News Paper

ಮುಈನುಸುನ್ನಾ , ಆಮ್ಆದ್ಮಿಕೇ ಸಾಥ್ ಕಾನ್ಫರೆನ್ಸ್

ಹಾವೇರಿ,ಮುಈನುಸುನ್ನಾ ಅಕಾಡೆಮಿ ಹಾವೇರಿ ಏಳನೇ ವರ್ಷೋತ್ಸವದ ಭಾಗವಾಗಿ ನಡೆದ ಸಾಥ್ ಕಾನ್ಫರೆನ್ಸ್ ಆಮ್ ಆದ್ಮಿಯೋಂಕೀ ಸಾಥ್ ಕಾನ್ಫರೆನ್ಸ್ ಸಂಸ್ಥೆಯ ಡೈರೆಕ್ಟರ್ ಹಾಗು ಕರ್ನಾಟಕ ಸರ್ಕಾರ ಯೋಜನಾ ಆಯೋಗದ ಸದಸ್ಯರಾದ ಡಾ, ಸಿ ಆರ್ ನಸೀರ್ ಅಹ್ಮದ್ ಇವರ ಅಧ್ಯಕ್ಷತೆಯಲ್ಲಿ ನಡೆಯಿತು… ಕಾರ್ಯಕ್ರಮ ವನ್ನು ಮಾಜಿ ಸಚಿವರೂ, ಮಂಗಳೂರು ಶಾಸಕರಾದ UT, ಖಾದರ್ ಉದ್ಘಾಟನೆ ಮಾಡಿದರು.

 

ಮುಸ್ಲಿಂ ಜಮಾಅತ್ ಉಪಾಧ್ಯಕ್ಷ ರಾದ ಡಾ‌ ಮುಹಮ್ಮದ್ ಫಾಝಿಲ್ ರಝ್ವಿ, ಮುಖ್ಯ ಪ್ರಭಾಷಣ ನಡೆಸಿದರು…ಕರ್ನಾಟಕ ಮುಸ್ಲಿಂ ಜಮಾಅತ್ ಕಾರ್ಯದರ್ಶಿ ಕೆ.ಎಂ ಸಿದ್ದೀಖ್,SYS ರಾಜ್ಯ ನಾಯಕರ ಮುಹ್ಸಿನ್ ರಿಫಾಯಿ ಹಾವೇರಿ, ,SSF ರಾಜ್ಯ ಕೋಶಾಧಿಕಾರಿ ಹಾಫಿಝ್ ಸುಫಿಯಾನ್ ಸಖಾಫಿ,ಸಾಥ್ ಕಾನ್ಫರೆನ್ಸ್ ನಿರ್ವಹಣಾ ಸಮಿತಿ ಚೆಯರ್ಮ್ಯಾನ್ ಅಬ್ಬಾಸ್ ಹಾಜಿ ಒಮಾನ್, ಹಾವೇರಿ ಜಿಲ್ಲಾ SSF ಅಧ್ಯಕ್ಷರಾದ ಅತ್ಹರ್ ಸಖಾಫಿ ಸವಣೂರು, ದಾವಣಗೆರೆ ಜಿಲ್ಲಾ SSF ಅಧ್ಯಕ್ಷರಾದ ಖಾದರ್ ಭಾಷಾ ದಾವಣಗೆರೆ ‌ಮಾತನಾಡಿದರು.

ಸಾಥ್ ನಿರ್ವಹಣಾ ಸಮಿತಿ ಕನ್ವೀನರ್ ಹುಸೈನ್ ಸ‌ಅದಿ ಹೊಸ್ಮಾರ್ ಸ್ವಾಗತಿಸಿ,ಮುಈನುಸುನ್ನಾ ಪ್ರಧಾನ ಕಾರ್ಯದರ್ಶಿ ಕೆ.ಎಂ ಮುಸ್ತಫಾ ನ‌ಈಮಿ ಕಾರ್ಯಕ್ರಮ ನಿರೂಪಿಸಿದರು.ಸಂಸ್ಥೆಯ ಜೊತೆ ಕಾರ್ಯದರ್ಶಿ ಫಾರೂಖ್ ಮುಸ್ಲಿಯಾರ್ ದಾವಣಗೆರೆ ವಂದಿಸಿದರು.