janadhvani

Kannada Online News Paper

ಇಂದಿನಿಂದ ಎಸ್ಸೆಸ್ಸೆಫ್ ಉಡುಪಿ ಜಿಲ್ಲಾ “ಮಖ್ದೂಮಿಯ್ಯ ಸಮ್ಮಿಟ್”

ಉಡುಪಿ,ಜೂನ್ 10: ಎಸ್ಸೆಸ್ಸೆಫ್ ಉಡುಪಿ ಜಿಲ್ಲಾ ದ’ಅವಾ ವಿಭಾಗದಿಂದ ಎಸ್ಸೆಸ್ಸೆಫ್ ಕರ್ನಾಟಕ ರಾಜ್ಯ ಸಮಿತಿಯು ರಾಜ್ಯಾದ್ಯಂತ ಜಿಲ್ಲಾಮಟ್ಟದಲ್ಲಿ ಮುತ‌ಅಲ್ಲಿಮರಿಗಾಗಿ ಅಧ್ಯಾತ್ಮಿಕ ನಾಯಕ ಶೈಖ್ ಝೈನುದ್ಧೀನ್ ಮಖ್ದೂಂ(ರ) ರವರ ಸ್ಮರಣಾರ್ಥ ಹಮ್ಮಿಕೊಂಡಿರುವ “ಮಖ್ದೂಮಿಯ ಸಮ್ಮಿಟ್” ವಿವಿಧ ವಿದ್ವಾಂಸರ ತರಗತಿಗಳೊಂದಿಗೆ ಎಸ್ಸೆಸ್ಸೆಫ್ ಉಡುಪಿ ಜಿಲ್ಲಾಧ್ಯಕ್ಷರಾದ ಅಹ್ಮದ್ ಶಬೀರ್ ಸಖಾಫಿ ಯವರ ಅಧ್ಯಕ್ಷತೆಯಲ್ಲಿ ಜೂನ್ 10,12,14 ಮೂರು ದಿನಗಳಲ್ಲಿ ನಡೆಯಲಿದೆ.

ಕಾರ್ಯಕ್ರಮದ ಮೊದಲ ದಿನ ಇಂದು (ಜೂನ್ 10) ಶಿಹಾಬುದ್ದೀನ್ ತಂಙಳ್ ಮದಕ ರವರು ದುಆ ದೊಂದಿಗೆ ಚಾಲನೆ ನೀಡುವರು. ಉಡುಪಿ ಜಿಲ್ಲಾ ಸಂಯುಕ್ತ ಸಹಾಯಕ ಖಾಝಿ ಅಲ್ಹಾಜ್ ಬಿಕೆ ಅಬ್ದುರ್ರಹ್ಮಾನ್ ಮದನಿ ಮೂಳೂರು ಉದ್ಘಾಟಿಸಲಿದ್ದಾರೆ. ಮುಹಮ್ಮದ್ ಬಾದುಷಾ ಸಖಾಫಿ ತಂಙಳ್ ಆಲಪ್ಪುಝ ವಿಷಯ ಮಂಡಿಸಲಿದ್ದಾರೆ. ಜಿಲ್ಲಾ ದ’ಅವಾ ಕನ್ವೀನರ್ ಸಿದ್ದೀಕ್ ಸಖಾಫಿ ಹಂಗಳೂರು ಸ್ವಾಗತಿಸುವರು.

ಕ್ಯಾಂಪಸ್ ಕಾರ್ಯದರ್ಶಿ ಶಾಹುಲ್ ನ’ಈಮಿ ವಂದಿಸುವರು. ಜಿಲ್ಲಾ ಪ್ರ.ಕಾರ್ಯದರ್ಶಿ ಎಂ.ಕೆ ಇಬ್ರಾಹಿಂ ಮಜೂರ್ ನಿರೂಪಿಸಲಿದ್ದಾರೆ. ಕಾರ್ಯಕ್ರಮವು ರಾತ್ರಿ 9 ರಿಂದ ಝೂಂ ಹಾಗೂ ಯ್ಯೂಟೂಬ್ ಮೂಲಕ ನಡೆಯಲಿದೆ.
ಜಿಲ್ಲೆಯ 5 ಡಿವಿಷನ್ ವ್ಯಾಪ್ತಿಯ ಹಲವಾರು ಮುತ‌ಅಲ್ಲಿಮರು ಹಾಗೂ ಜಿಲ್ಲಾ ಕಾರ್ಯಕಾರಿ ಸಮಿತಿ ಸದಸ್ಯರು ಭಾಗವಹಿಸಲಿದ್ದಾರೆ. ಎಂದು SSF ಜಿಲ್ಲಾ ದ‌ಅವಾ ಕಾರ್ಯದರ್ಶಿ ಮಜೀದ್ ಹನೀಫಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.