janadhvani

Kannada Online News Paper

ಕೊಡಗು SSFನಿಂದ ಮಖ್ದೂಮಿಯ ಸಮ್ಮಿಟ್

ಎಸ್ ಎಸ್ ಎಫ್ ಕರ್ನಾಟಕ ರಾಜ್ಯ ಸಮಿತಿಯು ರಾಜ್ಯದಾದ್ಯಂತ ಜಿಲ್ಲಾಮಟ್ಟದಲ್ಲಿ ಮುತ‌ಅಲ್ಲಿಮರಿಗಾಗಿ ಅಧ್ಯಾತ್ಮಿಕ ನಾಯಕ ಶೈಖ್ ಝೈನುದ್ಧೀನ್ ಮಖ್ದೂಂ(ರ) ರವರ ಸ್ಮರಣಾರ್ಥ ಹಮ್ಮಿಕೊಂಡಿರುವ “ಮಖ್ದೂಮಿಯ ಸಮ್ಮಿಟ್” ನಾಳೆಯಿಂದ ಪ್ರಾರಂಭವಾಗಲಿದೆ.

ಜಿಲ್ಲೆಯ ಸುಮಾರು 300 ಮುತ‌ಅಲ್ಲಿಮರು ಭಾಗವಹಿಸುವ ಈ ಕಾರ್ಯಕ್ರಮವು ಜೂನ್ ತಿಂಗಳ 11, 18, 25 ದಿನಾಂಕಗಳಲ್ಲಿ ವಿವಿಧ ವಿದ್ವಾಂಸರ ತರಗತಿಗಳೊಂದಿಗೆ ನಡೆಯಲಿದೆ ಎಂದು SSF ಜಿಲ್ಲಾ ದ‌ಅವಾ ಕಾರ್ಯದರ್ಶಿ ರಫೀಕ್ ಲತೀಫಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.