janadhvani

Kannada Online News Paper

ಸಹಾಯ್ ಮೂಡುಬಿದಿರೆಯಿಂದ ಸ್ಯಾನಿಟೈಝೇಷನ್

ಮೂಡುಬಿದಿರೆ: ಕರ್ನಾಟಕ ಮುಸ್ಲಿಂ ಜಮಾ ಅತ್ ಸಹಾಯ್ ತಂಡ ಮೂಡಬಿದಿರೆಯಿಂದ ಮೂಡುಬಿದಿರೆ ತಾಲೂಕು ಕಛೇರಿಯ ಆವರಣದಲ್ಲಿ ಸ್ಯಾನಿಟೈಝೇಷನ್ ಮಾಡುವ ಕಾರ್ಯಕ್ರಮದ ಉದ್ಘಾಟನೆ ಮಾಡುವ ಮೂಲಕ ಮೂಡಬಿದಿರೆಯ ತಹಶಿಲ್ದಾರ್ ಶ್ರೀ ಗುರುರಾಜ್ ರವರು ಚಾಲನೆ ನೀಡಿದರು.

ಕರ್ನಾಟಕ ಮುಸ್ಲಿಂ ಜಮಾಅತ್ ಅಧೀನದಲ್ಲಿ ಸಹಾಯ್ ಎಂಬ ಹೆಸರಿನಲ್ಲಿ SSF,SYS ನ ಸಹಭಾಗಿತ್ವ ದಲ್ಲಿ ಮಾಡುತ್ತಿರುವ ಇಂತಹ ಸಮಾಜ ಮುಖಿ ಕಾರ್ಯಕ್ರಮ ಶ್ಲಾಘನೀಯ.
ಅದನ್ನು ಮುಂದುವರಿಸಿ ಎಂದು ಮಾನ್ಯ ತಹಶಿಲ್ದಾರರು ಕರೆ ನೀಡಿದರು.

ಕಾರ್ಯಕ್ರಮದಲ್ಲಿ ಮೂಡುಬಿದಿರೆ ಮುಸ್ಲಿಂ ಜಮಾ ಅತ್ ನಾಯಕ ಹಮೀದ್ ಸಖಾಫಿ, SYS ನಾಯಕ ಗುಂಡೀರ್ ಉಮರಬ್ಬ, SSF ರಾಜ್ಯ ಸಮಿತಿ ಕಾರ್ಯದರ್ಶಿ
N C ರಹೀಂ ಹೊಸ್ಮಾರ್ ಭಾಗವಹಿಸಿದ್ದರು.

ಮುಸ್ಲಿಂ ಜಮಾಅತ್ ನಾಯಕ ಅಬ್ದುಲ್ ಖಾದರ್ ಸ್ವಾಗತಿಸಿ, ಜಬ್ಬಾರ್ ಮೂಡುಬಿದಿರೆ ವಂದಿಸಿದರು.