janadhvani

Kannada Online News Paper

ರಿಯಾದಿನಲ್ಲಿ ಅನಾರೋಗ್ಯಕ್ಕೊಳಗಾದ ವ್ಯಕ್ತಿಗೆ ನೆರವಾದ ಕೆಸಿಎಫ್

ರಿಯಾದಿನ ಅಲ್‌ಖರ್ಜ್ ನಲ್ಲಿ ಕೊರಿಯರ್ ಕಂಪೆನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಕುಕ್ಕಾಜೆಯ ಮಂಚಿಯ ನಿವಾಸಿ ಬಶೀರ್ ಎಂಬವರು ಅನಾರೋಗ್ಯಕ್ಕೊಳಗಾಗಿ ಕಂಪೆನಿಯ ನೆರವಿನೊಂದಿಗೆ ಅಲ್ ಖರ್ಜ್ ನ ಆಸ್ಪತ್ರೆಯೊಂದರಲ್ಲಿ ದಾಖಲಾಗಿದ್ದರು.

ಅಲ್ಲಿ ಚಿಕಿತ್ಸಾ ಸೌಲಭ್ಯಗಳಿಲ್ಲದೇ ಇರುವುದರಿಂದ ಆಸ್ಪತ್ರೆಯ ವೈದ್ಯರ ನಿರ್ದೇಶನ ಪ್ರಕಾರ ಕಂಪೆನಿಯ ನೆರವಿನೊಂದಿಗೆ ರಿಯಾದಿನ ಉನ್ನತ ಆಸ್ಪತ್ರೆಯಾದ ಸಿಮೇಶಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿ, ನಂತರ ರೋಗಿ ಕೆಲಸ ಮಾಡುತ್ತಿದ್ದ ಕಂಪೆನಿಯೊಂದಿಗೆ ಮಾತನಾಡಿ ಬೇಕಾದ ದಾಖಲೆಗಳನ್ನು ಸಿದ್ಧಪಡಿಸಿ ಸರಿಸುಮಾರು ಒಂದೂವರೆ ತಿಂಗಳ ಆರೈಕೆಯ ನಂತರ ಮೇ 4 ನೇ ತಾರೀಕಿನಂದು ಒಬ್ಬ ಸಹಪ್ರಯಾಣಿಕನೊಂದಿಗೆ ಊರಿಗೆ ಕಳುಹಿಸಿ ಕೊಡಲಾಯಿತು.

ಕರ್ನಾಟಕ ಕಲ್ಚರಲ್ ಫೌಂಡೇಷನ್ ರಿಯಾದ್ ಝೋನ್ ಸಾಂತ್ವನ ಇಲಾಖೆಯ ಅಧ್ಯಕ್ಷ ಮಜೀದ್ ವಿಟ್ಲ, ಇಬ್ರಾಹಿಂ ಮುರ, ಸಲಾಂ ಹಳೆಯಂಗಡಿ, ಬಶೀರ್ ರವರ ಅಣ್ಣ ರಝಾಕ್ ಮಂಚಿ, ಯಾಕೂಬ್ ಸಖಾಫಿ , ಮತ್ತು ರಿಯಾದಿನ ಸಾಮಾಜಿಕ ಕಾರ್ಯಕರ್ತ ಸಲೀಂ ಮಿತ್ತೂರು ರೋಗಿಯ ಆರೈಕೆಯ ಆರಂಭದಿಂದ ಕೊನೆಯವರೆಗೆ ಸಂಪೂರ್ಣವಾಗಿ ತಮ್ಮನ್ನು ತೊಡಗಿಸಿ ಸಹಕರಿಸಿದರು.

ಸಾಂತ್ವನ ಇಲಾಖೆ
ಕೆಸಿಎಫ್ ರಿಯಾದ್ ಝೋನ್