ಮನಾಮ: ಕೋವಿಡ್ ಬಿಕ್ಕಟ್ಟನ್ನು ನಿವಾರಿಸಲು ಮತ್ತೊಂದು ಕೊಲ್ಲಿ ದೇಶವೂ ಭಾರತಕ್ಕೆ ಸಹಾಯ ಹಸ್ತವನ್ನು ಚಾಚಿದೆ. ಬಹ್ರೇನ್ ಹೊಸ ಸಹಾಯದ ಪ್ರಸ್ತಾಪವನ್ನು ನೀಡಿದ್ದು. ಬಹ್ರೇನ್‌ನಿಂದ 40 ಮೆಟ್ರಿಕ್ ಟನ್ ದ್ರವ ಆಮ್ಲಜನಕವನ್ನು ಸಾಗಿಸುವ ಎರಡು ಹಡಗುಗಳು ನಾಳೆ ಭಾರತಕ್ಕೆ ತೆರಳಲಿವೆ.
ಐಎನ್‌ಎಸ್ ಕೋಲ್ಕತಾ ಮತ್ತು ಐಎನ್‌ಎಸ್ ತಲ್ವಾರ್ ಹಡಗುಗಳು ಭಾರತದಿಂದ ಮನಮಾ ಬಂದರಿಗೆ ತಲುಪಿದೆ.ಆಮ್ಲಜನಕದ ಜೊತೆಗೆ ಭಾರತಕ್ಕೆ ವೈದ್ಯಕೀಯ ನೆರವು ನೀಡುವುದಾಗಿ ಬಹ್ರೇನಿ ಅಧಿಕಾರಿಗಳು ಹೇಳಿದ್ದಾರೆ.
ಈ ಹಿಂದೆ ಯುಎಇ, ಸೌದಿ ಅರೇಬಿಯಾ, ಕತಾರ್ ಸೇರಿದಂತೆ ಕೊಲ್ಲಿ ರಾಷ್ಟ್ರಗಳು ಭಾರತಕ್ಕೆ ನೆರವು ನೀಡಿದ್ದವು. ಈ ಪೈಕಿ ಪ್ರಥಮ ಸಹಕಾರವು ಸೌದಿ ಅರೇಬಿಯಾದಿಂದ ಭಾರತಕ್ಕೆ ತಲುಪಿದೆ. ಎಲ್ಲಾ ದೇಶಗಳು, ವಿದೇಶಾಂಗ ಸಚಿವ ಜಯಶಂಕರ್ ಅವರಿಗೆ ಕರೆ ಮಾಡಿ ಭಾರತಕ್ಕೆ ಸಾಧ್ಯವಿರುವ ಎಲ್ಲ ಸಹಾಯದ ಭರವಸೆ ನೀಡಿದೆ.