janadhvani

Kannada Online News Paper

ಕಬಕದಲ್ಲಿ ಶುಭಾರಂಭಗೊಂಡ ಮುಹಮ್ಮದೀಯಾ ಟ್ರಾವೆಲ್ಸ್

ಹಲವಾರು ವರ್ಷಗಳಿಂದ ಹಜ್ಜ್ ಹಾಗೂ ಉಮ್ರಾ ಸೇವೆ ನಡೆಸಿ ಅನುಭವವನ್ನು ಹೊಂದಿದ ಅಶ್ರಫ್ ಸಖಾಫಿ ಪರ್ಪುಂಜ ಹಾಗೂ ಝುಬೈರುಲ್ಲಾಹ್ ಶಕಲೇಶ್ಪುರರವರ ಮಾಲಿಕತ್ವದ “ಮುಹಮ್ಮದೀಯಾ ಟ್ರಾವೆಲ್ಸ್” ಇಂದು ಪುತ್ತೂರಿನ ಹೃದಯ ಭಾಗವಾದ ಕಬಕದಲ್ಲಿರುವ ದಾರುಲ್ ಇರ್ಷಾದ್ ಕಾಂಪ್ಲೆಕ್ಸ್ ನಲ್ಲಿ ಆರಂಭಗೊಂಡಿದೆ.

ಶೈಖುನಾ ಝೈನುಲ್ ಉಲಮಾ ಮಾಣಿ ಉಸ್ತಾದರ ದುಆದೊಂದಿಗೆ ಸಯ್ಯದ್ ಮುಝಮ್ಮಿಲ್ ತಂಙಳ್ ರವರು ಸಂಸ್ಥೆಯನ್ನು ಉದ್ಘಾಟಿಸಿದರು. ಶೈಖುನಾ ಉಕ್ಕುಡ ಉಸ್ತಾದ್ ರವರು ಟ್ರಾವೆಲ್ಸ್ ವ್ಯವಸ್ಥೆಗೆ ಚಾಲನೆ ನೀಡಿದರು.

ಅಲ್ ಹಾಜ್ ಅಬೂನಝಾ ಪರ್ಪುಂಜ, ಸ್ವಲಾಹುದ್ದೀನ್ ತಂಙಳ್ ಕೆ.ಜಿ.ಎನ್ ಮಿತ್ತೂರು, ಅಬ್ದುಲ್ ರಝ್ಝಾಕ್ ಅಲ್ ಖಾಸಿಮಿ, ಸಯ್ಯದ್ ಸಾಬಿತ್ ತಂಙಳ್ ಪಾಟ್ರಕೋಡಿ, ಬೀಟಿಗೆ ಅಬ್ದುಲ್ ರಹ್ಮಾನ್ ಸಖಾಫಿ, ಇರ್ಫಾನ್ ಹಿಮಮಿ, ಶಾಫಿ ಮದನಿ ಮಾಡಾವು ಹಾಗೂ ಇನ್ನಿತರ ಹಿತೈಷಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿ ಸಂಸ್ಥೆಗೆ ಹಾರೈಸಿದರು.