ಮಂಗಳೂರು: ಖುರ್ಆನ್ ಮನುಕುಲದ ಮಾರ್ಗದರ್ಶಿ, ಖುರ್ಆನಿನ ಪ್ರತಿಯೊಂದು ಪದಗಳೂ ಮನುಷ್ಯ ಬದುಕಿಗೆ ಇರುವ ದಿಕ್ಸೂಚಿ ಯಾಗಿರುತ್ತವೆ. ಅಲ್ಲಾಹನ ವಚನವಾಗಿರುವ ಖುರ್ಆನಿನಲ್ಲಿ ಇವತ್ತಿನವರೆಗೂ ಯಾವುದೇ ತಿದ್ದುಪಡಿ ಮಾಡಿಲ್ಲ ,ಮಾಡಲು ಸಾಧ್ಯವೂ ಇಲ್ಲ, ಅದರ ಅಗತ್ಯವೂ ಇಲ್ಲ. ಹೀಗಿರುವಾಗ ಪವಿತ್ರ ಖುರ್ಆನಿನಲ್ಲಿ ತಿದ್ದುಪಡಿ ಮಾಡಬೇಕೆನ್ನುವ ಹೇಳಿಕೆ ಅಜ್ಞಾನದ ಪರಾಕಾಷ್ಠೆ ಮತ್ತು ಸಮಾಜದ ಸ್ವಾಸ್ಥ್ಯವನ್ನು ಕೆಡವಲು ಇರುವ ಯತ್ನ ಮಾತ್ರ.
ಧರ್ಮ ಗ್ರಂಥಗಳನ್ನು ಅವಹೇಳನ ಮಾಡಿ ಕೋಮುವಾದಕ್ಕೆ ಪ್ರಚೋದನೆ ಮಾಡುವ ಹೇಳಿಕೆ ಕೊಡುವವರನ್ನು ಕಾನೂನಿನಡಿಯಲ್ಲಿ ಕಠಿಣ ಶಿಕ್ಷೆಗೆ ಗುರಿಪಡಿಸಬೇಕೆಂದು SSF ಕರ್ನಾಟಕ ರಾಜ್ಯಾಧ್ಯಕ್ಷರಾದ ಅಬ್ದುಲ್ಲತೀಫ್ ಸಅದಿ ಶಿವಮೊಗ್ಗ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದರು.
ಎಸ್ಸೆಸ್ಸೆಫ್ ಕರ್ನಾಟಕ