janadhvani

Kannada Online News Paper

ಮಾರ್ಚ್ 16ರಂದು ಅಲ್-ಮದೀನಾ ಮಂಜನಾಡಿಯಲ್ಲಿ Unite Gulf Summit ಕಾರ್ಯಕ್ರಮ

ಅಲ್-ಮದೀನಾ ಇಸ್ಲಾಮಿಕ್ ಕಾಂಪ್ಲೆಕ್ಸ್, ಮಂಜನಾಡಿಯಲ್ಲಿ ಇದೇ ಬರುವ ಮಾರ್ಚ್ 16ರಂದು ಬೆಳಿಗ್ಗೆ 10.30ರಿಂದ “Unite Gulf Summit” ಕಾರ್ಯಕ್ರಮವು ಅಲ್-ಮದೀನಾ ಇಸ್ಲಾಮಿಕ್ ಕಾಂಪ್ಲೆಕ್ಸ್ ಕ್ಯಾಂಪಸ್ ನಲ್ಲಿರುವ ಶರಫುಲ್ ಉಲಮಾ ಸಭಾಂಗಣದಲ್ಲಿ ನಡೆಯಲಿದೆ.

ಇದೇ ದಿವಸ ಬೆಳಿಗ್ಗೆ 10.00ಗಂಟೆಗೆ ಅಲ್-ಮದೀನಾ ಇಸ್ಲಾಮಿಕ್ ಕಾಂಪ್ಲೆಕ್ಸ್ ಸೌದಿ ಅರೇಬಿಯಾ ರಾಷ್ಟ್ರೀಯ ಸಮಿತಿಯ ಪ್ರಾಯೋಜಕತ್ವದಲ್ಲಿ ನಿರ್ಮಿಸಿದ ನೂತನ ಫ್ಲಾಟ್ ನ್ನು ಅಸ್ಸಯ್ಯಿದ್ ಇಸ್ಮಾಯಿಲ್ ತಂಙಳ್ ರವರು ಉದ್ಘಾಟನೆ ಮಾಡಲಿದ್ದಾರೆ.

ಊರಿನಲ್ಲಿರುವ ಸದಸ್ಯರು ಹಾಗೂ ಹಿತೈಷಿಗಳೆಲ್ಲರೂ ಕಾರ್ಯಕ್ರಮದಲ್ಲಿ ಭಾಗವಹಿಸಬೇಕಾಗಿ ಸಂಸ್ಥೆಯ ಮ್ಯಾನೇಜರ್ ಅಬ್ದುಲ್ ಖಾದರ್ ಸಖಾಫಿಯವರು ಕೇಳಿಕೊಂಡಿದ್ದಾರೆ.