ಬಂಟ್ವಾಳ ತಾಲೂಕಿನ ಅಮ್ಮುಂಜೆ, ಕರಿಯಂಗಳ ಮತ್ತು ಬಡಗಬೆಳ್ಳೂರು ಗ್ರಾಮದ 8 ಜಮಾತ್ ಗಳ ಒಕ್ಕೂಟವಾಗಿದೆ ಜಮಾತ್ ರಿಸರ್ಚ ಸೆಂಟರ್.
ಕಳೆದ 2 ವರ್ಷಗಳಿಂದ ನಿರಂತರವಾಗಿ ಸಮಾಜಿಕ ಕಾರ್ಯಾಚರಣೆಯಲ್ಲಿ ತೊಡಗಿಕೊಂಡಿರುವ ಇದರ ಪ್ರಮುಖ ಉದ್ದೇಶ ಸಮುದಾಯವನ್ನು ಶಿಕ್ಷಿತಗೊಳಿಸುದರೊಂದಿಗೆ ಉನ್ನತ ಸರ್ಕಾರಿ ಸೇವೆಗಳಲ್ಲಿ ತೊಡಗಿಸುವುದಾಗಿದೆ.
ಇದರ ಅಧೀನದಲ್ಲಿ ಆಯ್ದ 5 ಪ್ರಮುಖ ಸ್ಥಳಗಳಲ್ಲಿ ಆಧಾರ್ ಕಾರ್ಡ್ ತಿದ್ದುಪಡಿ, ವೋಟರ್ ಐಡಿ ತಿದ್ದುಪಡಿ, ಲೇಬರ್ ಕಾರ್ಡ್, ಹಿರಿಯ ನಾಗರಿಕರ ಕಾರ್ಡ್ ನೋಂದಾವಣಿ ಕಾರ್ಯಗಾರ ವೆಲ್ನೆಸ್ ಹೆಲ್ಪ್ ಲೈನ್ ಮಂಗಳೂರು ಇವರ ಸಹಯೋಗದೊಂದಿಗೆ ನಡೆಯಲಿದೆ.
ದಿನಾಂಕ-13-3-21 ಗುಂಡಿಗುಮೇರ್ ಜುಮಾ ಮಸೀದಿ 14-3-21 ಬಡಕಬೈಲ್ ಮಸೀದಿ, 16-3-21 ಕೊಳತ್ತಮಜಲು ಜುಮಾ ಮಸೀದಿ,20-3-21 ಅಮ್ಮುಂಜೆ ಜುಮಾ ಮಸೀದಿ ಮತ್ತು 21-3-21 ರಂದು ಕಲಾಯಿ ಜುಮಾ ಮಸೀದಿಯಲ್ಲಿ ಕಾರ್ಯಗಾರ ನಡೆಯಲಿದೆ.
ಹಾಗೂ ದಿನಾಂಕ 14-3-21 ಆದಿತ್ಯವಾರದಂದು SSLC ವಿದ್ಯಾರ್ಥಿಗಳಿಗೆ ಪ್ರೇರಣಾ ಶಿಬಿರ ಬಡಕಬೈಲ್ ಇಮಾದ್ ಅಕಾಡೆಮಿಯಲ್ಲಿ ಖ್ಯಾತ ತರಬೇತುದಾರರಾದ ಅಬ್ದುಲ್ ರಝಾಕ್ ಅನಂತಾಡಿ ಯವರಿಂದ ನಡೆಯಲಿದೆ.
ಸಾರ್ವಜನಿಕರು ಮತ್ತು ವಿದ್ಯಾರ್ಥಿಗಳು ಈ ಎರಡು ಕಾರ್ಯಕ್ರಮದ ಸದುಪಯೋಗವನ್ನು ಪಡೆಯಲು ಸಮಿತಿಯ ಪಧಾದಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.