ಕೋವಿಡ್ ಕಾರಣದಿಂದಾಗಿ ಸೌದಿ ಅರೇಬಿಯಾದಲ್ಲಿ ಒಟ್ಟು 10 ಮಸೀದಿಗಳನ್ನು ತಾತ್ಕಾಲಿಕವಾಗಿ ಮುಚ್ಚಲಾಗುತ್ತದೆ ಎಂದು ಇಸ್ಲಾಮಿಕ್ ವ್ಯವಹಾರ ಸಚಿವಾಲಯದಿಂದ ಮಂಗಳವಾರ ತಿಳಿಸಿದ್ದಾಗಿ ಅರಬ್ ನ್ಯೂಸ್ ವರದಿ ಮಾಡಿದೆ.
ಮುಚ್ಚಲಾಗುವ ಮಸೀದಿಗಳು ಜಿಝಾನ್, ರಿಯಾದ್, ಮಕ್ಕತುಲ್ ಮುಕರ್ರಮ, ಅಸೀರ್ ಹಾಗೂ ಮದೀನಾ ಪ್ರಾಂತ್ಯಗಳಿಗೆ ಒಳಪಟ್ಟಿರುತ್ತದೆ.
ಇತ್ತೀಚಿನ ದಿನಗಳಲ್ಲಿ ಒಟ್ಟು 135 ಮಸೀದಿಗಳನ್ನು ತಾತ್ಕಾಲಿಕವಾಗಿ ಮುಚ್ಚಿದ್ದು, ಅದರಲ್ಲಿ 108 ಮಸೀದಿಗಳನ್ನು ನಂತರದ ದಿನಗಳಲ್ಲಿ ತೆರೆಯಲಾಗಿದೆ.
ಆರೋಗ್ಯ ಮತ್ತು ಸುರಕ್ಷತೆಗೆ ಬೇಕಾಗಿ ಸೌದಿ ಅರೇಬಿಯಾದಲ್ಲಿರುವ ಎಲ್ಲಾ ಮಸೀದಿಗಳ ತಪಾಸಣೆ ಮಾಡಲಾಗುವುದು ಎಂದು ಸಚಿವಾಲಯದಿಂದ ತಿಳಿಸಿದ್ದು, ಮಸೀದಿಯಲ್ಲಿ ಪಾಲಿಸಬೇಕಾದ ಸುರಕ್ಷಿತ ಕ್ರಮಗಳನ್ನು ಅನುಸರಿಸಲು ಮಸೀದಿಯಲ್ಲಿರುವ ಸಿಬ್ಬಂದಿಗಳಿಗೆ ಕರೆ ನೀಡಲಾಗಿದೆ.