janadhvani

Kannada Online News Paper

ಸೌದಿ: ಖಾಸಗೀ ವಲಯದಲ್ಲಿ ವಾರದಲ್ಲಿ ಎರಡು ರಜೆ- ಬಹುತೇಕ ಖಚಿತ

ರಿಯಾದ್: ಸೌದಿ ಅರೇಬಿಯಾದಲ್ಲಿ ವಾರದಲ್ಲಿ ಎರಡು ದಿನಗಳ ರಜಾದಿನದ ಅನುಷ್ಠಾನದ ಬಗ್ಗೆ ಖಾಸಗಿ ವಲಯದ ಕಂಪನಿಗಳು ಪ್ರತಿಕ್ರಿಯೆ ನೀಡಬೇಕಾದ ಗಡುವು ಮುಗಿದಿದೆ. ಎಂಟು ಗಂಟೆಗಳಿಗಿಂತ ಹೆಚ್ಚು ಕೆಲಸ ಮಾಡುವುದು ಮತ್ತು ರಜಾದಿನ ಕೆಲಸ ಮಾಡುವುದನ್ನು ಅಧಿಕಾವಧಿ(overtimes) ಎಂದು ಪರಿಗಣಿಸಲಾಗುತ್ತದೆ. ಮಾನವಶಕ್ತಿ ಮತ್ತು ಸಾಮಾಜಿಕ ಅಭಿವೃದ್ಧಿ ಸಚಿವಾಲಯದ ಅಂತಿಮ ಅನುಮೋದನೆಯೊಂದಿಗೆ ಕಾನೂನು ಜಾರಿಗೆ ಬರಲಿದೆ.ಮಾರ್ಚ್‌ನಲ್ಲಿ ತರಲಾಗುವ ಕಾರ್ಮಿಕ ಕಾನೂನು ತಿದ್ದುಪಡಿಗಳನ್ನು ನಿರೀಕ್ಷಿಸಿ ಸೌದಿ ಅರೇಬಿಯಾ ಹೊಸ ಕಾನೂನುಗಳನ್ನು ತರುತ್ತಿದೆ.

ಸಚಿವಾಲಯವು ಖಾಸಗಿ ವಲಯದಲ್ಲಿ ವಾರದ ಎರಡು ದಿನಗಳ ರಜೆಯನ್ನು ಪ್ರಸ್ತಾಪಿಸಿತ್ತು. ಖಾಸಗಿ ವಲಯಕ್ಕೆ ಈ ಬಗ್ಗೆ ಪ್ರತಿಕ್ರಿಯಿಸಲು ನೀಡಲಾಗಿದ್ದ ಸಮಯ ಇಂದು ಕೊನೆಗೊಂಡಿದೆ. ಪ್ರಸ್ತುತ, ಕೆಲಸದ ಸಮಯವು ವಾರಕ್ಕೆ 48 ಗಂಟೆಗಳು. ಇದನ್ನು ನಲವತ್ತು ಗಂಟೆಗಳವರೆಗೆ ಇಳಿಸುವ ಚಿಂತೆಯಿದೆ. ಆದೇಶವು ಜಾರಿಗೆ ಬಂದರೆ, ಈ ಸಮಯಕ್ಕಿಂತ ಹೆಚ್ಚು ಕೆಲಸ ಮಾಡಿದವರಿಗೆ ಹೆಚ್ಚುವರಿ ಹಣವನ್ನು ಪಾವತಿಸಬೇಕಾಗುತ್ತದೆ. ರಂಜಾನ್‌ನಲ್ಲಿ ವಾರದ 36 ಗಂಟೆಗಳ ಕೆಲಸದ ಸಮಯವನ್ನು 30 ಗಂಟೆಗೆ ಇಳಿಸಲಾಗುವುದು.

ಅಂತಿಮ ಅನುಮೋದನೆಯೊಂದಿಗೆ, ಇದು ಖಾಸಗಿ ವಲಯದ ಸುಮಾರು 70 ಲಕ್ಷ ವಿದೇಶಿ ಕಾರ್ಮಿಕರಿಗೆ ಲಾಭವಾಗಲಿದೆ. ವಾರದಲ್ಲಿ ಕೆಲಸದ ದಿನ ಐದು ದಿನಗಳಾಗಿ ಬದಲಾಗಲಿದೆ. ಆರನೇ ದಿನ ಕೆಲಸ ಮಾಡಿದರೆ, ಅದು ಓವರ್‌ಟೈಮ್ ವಿಭಾಗಕ್ಕೆ ಸೇರುತ್ತದೆ. ಪಂಚಿಂಗ್ ವ್ಯವಸ್ಥೆಯನ್ನು ಹೊಂದಿರುವ ಸಂಸ್ಥೆಗಳಲ್ಲಿ ಕಾರ್ಮಿಕರ ಕೆಲಸದ ಸಮಯದ ದಾಖಲೆಗಳು ಸಹ ಉದ್ಯೋಗ ಪ್ರಕರಣಗಳಲ್ಲಿ ನಿರ್ಣಾಯಕವಾಗಲಿದೆ.ವೇತನ ಸಹಿತ ಹೆರಿಗೆ ರಜೆಯನ್ನು 10 ರಿಂದ 14 ವಾರಗಳವರೆಗೆ ಏರಿಸುವ ಕ್ರಮವನ್ನು ಹೊಸ ಕಾನೂನಿನಲ್ಲಿ ಸೇರಿಸಲಾಗಿದೆ.

error: Content is protected !! Not allowed copy content from janadhvani.com